ಪಡಂಗಡಿ: ಇಲ್ಲಿನ ಓಡೀಲು ದೇವಸ್ಥಾನದ ದ್ವಾರದ ಬಳಿ ಪಲ್ಸರ್ ಬೈಕ್ ಆಲ್ಟೋ ಕಾರು ನಡುವೆ ಡಿಕ್ಕಿ ಸಂಭವಿಸಿದ್ದು. ಪ್ರಗತಿಪರ ಕೃಷಿಕ ಅನಿಲ್ ಬಳಂಜ ಗಂಭೀರಗಾಯಗೊಂಡಿದ್ದು, ಅವರ ಪತ್ನಿ ಸಾವನ್ನಪ್ಪಿದ್ದಾರೆ.
ಜೊತೆಯಲ್ಲಿದ್ದ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅನಿಲ್ ಬಳಂಜರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.



























