ಪುತ್ತೂರು : ಕಳೆದ 20 ದಿನಗಳಿಂದ ಭಾರೀ ಸುದ್ದಿ ಯಲ್ಲಿರುವ ಚಿರತೆ ಮತ್ತೆ ಸಾಲ್ಮಾರದಲ್ಲಿ ಸದ್ದು ಮಾಡಿದೆ. ಕೋಡಿಂಬಾಡಿ – ಪೆರ್ನೆ – ತಿಂಗಳಾಡಿ – ಸರ್ವೆ ಯಲ್ಲಿ ಸದ್ದು ಮಾಡಿದ್ದ ಚಿರತೆ ಸಾಲ್ಮರದಲ್ಲಿ ಹೆಜ್ಜೆ ಗುರುತು ಬಿಟ್ಟು ಸದ್ಯ ಸಾಲ್ಮರದ ಹಾಗೂ ಆಸುಪಾಸಿನ ಜನತೆ ಗೆ ಆತಂಕವನ್ನು ಉಂಟು ಮಾಡುವಂತೆ ಮಾಡಿದೆ.
ಮುದ್ದೊಡಿ ನೌಫಲ್ ಎಂಬವರ ಮನೆಯಲ್ಲಿ ಜ.6 ರಾತ್ರಿ ಜಾವ ನಾಯಿಗಳು ಜೋರಾಗಿ ಬೋಗಳುತ್ತಿತ್ತು ಹಾಗೂ ಮುಂಜಾನೆ ಪರಿಶೀಲಿಸಿದಾಗ ಚಿರತೆಯ ಮಾದರಿಯ ಹೆಜ್ಜೆ ಗುರುತು ಪತ್ತೆ ಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಜ್ಜೆ ಗುರುತಿನ ಭಾವಚಿತ್ರ ಪಡೆದು ತೆರಳಿದ್ದಾರೆ.