ಪುತ್ತೂರು: ಕೊಡಿಪ್ಪಾಡಿ ಕಾವೇರಿ ರೆಸಿಡೆನ್ಸಿ ನಿವಾಸಿ, ಬಿಜೆಪಿ ಕೊಡಿಪ್ಪಾಡಿ ಶಕ್ತಿಕೇಂದ್ರದ ಸಂಚಾಲಕ ಅಭಿಜಿತ್ ಕೊಡಿಪ್ಪಾಡಿಯವರ ತಾಯಿ ಪುಷ್ಪ ರವರು ಸೆ.21 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅಭಿಜಿತ್ ರವರ ಮದುವೆ ದಿನ ಪುಷ್ಪ ರವರ ಆರೋಗ್ಯದಲ್ಲಿ ಏರುಪೇರಾಗಿ ಮನೆಯಲ್ಲಿ ಕುಸಿದು ಬಿದ್ದು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತಾಯಿಯ ಅನಾರೋಗ್ಯದಿಂದಾಗಿ ಅಭಿಜಿತ್ ರವರ ಮದುವೆ ಮುಂದೂಡಲಾಗಿತ್ತು, ಆದರೇ ಚಿಕಿತ್ಸೆ ಪಡೆಯುತ್ತಿದ್ದ ಪುಷ್ಪ ರವರು ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತಿ ಸುಬ್ರಾಯ, ಮಕ್ಕಳಾದ ಅಭಿಷೇಕ್, ಅಭಿಜಿತ್, ಅಭಿಶ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.