ಪುತ್ತೂರು: ಗುತ್ತಿಗೆ ಪದ್ಧತಿ ಬದಲು ನೆರವೇತನವನ್ನು ಆಗ್ರಹಿಸಿ ರಾಜ್ಯ ನಗರಭೆ, ಪುರಸಭೆ, ಪಟ್ಟಣ ಪಂಚಾಯತಿ, ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೆ.21 ರಂದು ನಡೆದ ಪ್ರತಿಭಟನೆಯಲ್ಲಿ ಪುತ್ತೂರು ನಗರಸಭೆಯ ಪೌರ ಕಾರ್ಮಿಕರ ಸಂಘದ ಪ್ರಮುಖರು ಭಾಗವಹಿಸಿದ್ದಾರೆ.
ಪೌರ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಎಂ.ಪಿ.ನಾಗಣ್ಣ ಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪುತ್ತೂರು ನಗರಸಭೆ ಪೌರಾ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಚಿದಾನಂದ್, ಅಮಿತ್, ರಾಧಾಕೃಷ್ಣ, ಸಿರಾಜ್, ಸದ್ದಾಂ ಮತ್ತಿತರರು ಭಾಗವಹಿಸಿದ್ದರು.