ಮಂಗಳೂರು: ಫ್ಲ್ಯಾಟ್ ಲೀಸ್‌ಗೆ ನೀಡುವುದಾಗಿ ನಕಲಿ ದಾಖಲೆ ತೋರಿಸಿ, ಮಹಿಳೆಯೊಬ್ಬರಿಂದ 5 ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಮೂಲದ ಮಹಿಳೆ ಮಂಗಳೂರಿನಲ್ಲಿ ವೃತ್ತಿಯಲ್ಲಿದ್ದು, ಕಳೆದ ವರ್ಷ ಜೂನ್‌ನಲ್ಲಿ ಇವರು ಬಾಡಿಗೆ ಮನೆ ಪಡೆಯಲು ಹುಡುಕಾಟದಲ್ಲಿದ್ದರು. ಈ ವೇಳೆ ಕದ್ರಿ ಪರಿಸರದ ನಿವಾಸಿ ಬ್ರೋಕರ್ ಪರಿಚಯವಾಗಿದ್ದು, ಕೆ.ಎಸ್.ರಾವ್ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲಮಹಡಿಯಲ್ಲಿ ಮನೆಯೊಂದು ಲೀಸ್‌ಗೆ ಇರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಮನೆಯನ್ನು ನೋಡಿದ ಮಹಿಳೆ, ಇಷ್ಟ ಆಗಿದ್ದರಿಂದ ಅದನ್ನು 5 ಲಕ್ಷ ರೂ.ಗೆ ಲೀಸ್‌ಗೆ ಪಡೆಯಲು ಮುಂದಾಗಿದ್ದರು.
ಅದರಂತೆ, ಬ್ರೋಕರ್ ಮನೆಯ ಮಾಲಕನೆಂದು ಓರ್ವನನ್ನು ಪರಿಚಯಿಸಿ 5 ಲಕ್ಷರೂ. ಇವರ ಹೆಸರಲ್ಲಿ ಡೆಪಾಸಿಟ್ ಮಾಡುವಂತೆ ಹೇಳಿದ್ದ ಅದರಂತೆ ಮಹಿಳೆ ಹೆಸರಿನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು ಎಂದು ತಿಳಿದು ಬಂದಿದೆ. ಎರಡೂ ಪಾರ್ಟಿಗಳಿಂದ ಲೀಸ್ ಅಗ್ರಿಮೆಂಟ್ ನಡೆದಿದ್ದು, ಮಹಿಳೆ ತನ್ನ ವಾಸವನ್ನು ಬದಲಿಸಿ ಅಲ್ಲಿಗೆ ಶಿಫ್ಟ್ ಮಾಡಿಕೊಂಡಿದ್ದರೆನ್ನಲಾಗಿದೆ.
ಆದರೆ, ಮೂರು ತಿಂಗಳ ನಂತರ ಮತ್ತೋರ್ವ ಬಂದಿದ್ದು, ಈ ಮನೆ ತನ್ನ ಹೆಸರಲ್ಲಿದೆ. ನೀವು ಬಂದು ಮೂರು ತಿಂಗಳು ಆಗಿದೆ. ಬಾಡಿಗೆ ಕೊಡುವಂತೆ ಒತ್ತಾಯಿಸಿದ್ದಾರೆ ಮಹಿಳೆ ತಾನು ಮಾಡಿದ್ದ ಲೀಸ್ ಅಗ್ರಿಮೆಂಟ್ ತೋರಿಸಿ, 5 ಲಕ್ಷ ರೂ. ಡಿಪಾಸಿಟ್ ಮಾಡಿದ್ದನ್ನು ಹೇಳಿದ್ದಾರೆ. ಆದರೆ, ಅದ್ಯಾವುದಕ್ಕೂ ಒಪ್ಪದ ಅವರು, ಈ ಮನೆ ನನ್ನ ಹೆಸರಲ್ಲಿದೆ. ನೀವು ಯಾರಿಗೆ ಹಣ ಹಾಕಿದ್ದೀರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಅಷ್ಟರಲ್ಲಿ ತಾನು ಮೋಸ ಹೋಗಿದ್ದು ಮಹಿಳೆಗೆ ಅರಿವಾಗಿದ್ದು ನಕಲಿ ಡಾಕ್ಯುಮೆಂಟ್ ಹೆಸರಲ್ಲಿ ವಂಚನೆ ಮಾಡಿರುವ ಬಗ್ಗೆ ಬಂದರು ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.