ಪುತ್ತೂರು: ಕೆದಂಬಾಡಿ ವಲಯ ಕಾಂಗ್ರೆಸ್ ಸಭೆಯು ಪುರಂದರ ರೈ ಕೋರಿಕ್ಕಾರು ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ ತಿಂಗಳ ಕಾರ್ಯಕ್ರಮದ ವರದಿ ನೀಡಿದರು.
ಸಭೆಯಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಇನ್ನೂ ಬಲಿಷ್ಠ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾರ್ಯದರ್ಶಿ ಹಬೀಬು ಕಣ್ಣೂರ್, ಅಸಂಘಟಿತ ಕಾರ್ಮಿಕ ಬ್ಲಾಕ್ ಅಧ್ಯಕ್ಷ ಮೆಲ್ವಿನ್ ಮೊಂತೆರೊ, ಹಿರಿಯ ಮುಖಂಡ ಗಂಗಾಧರ ರೈ ಕುಯ್ಯರ್, ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಪುತ್ತೂರು ಬ್ಲಾಕ್ ಮಹಿಳಾ ಸಂಘಟನಾ ಕಾರ್ಯದರ್ಶಿಗಳಾದ ಸುಜಾತಾ ರೈ ಪಂಜಿಗುಡ್ಡೆ, ಅಸ್ಮ ಇಬ್ರಾಹಿಂ, ಬೂತ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಘಟ್ಟಮನೆ, ನಾರಾಯಣ ಪಾಟಳಿ, ಇಸ್ಮಾಯಿಲ್ ಗಟ್ಟಮನೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಝಕ್ ತಿಂಗಳಾಡಿ ವಂದಿಸಿದರು.