ವಿಟ್ಲ : ಕೇರಳದ ಗಡಿನಾಡಿನ ಜನತೆ ಅದರಲ್ಲೂ ಎಣ್ಮಕಜೆ ಪಂಚಾಯತ್ ನ ಅತಿ ಹೆಚ್ಚು ಜನರಿಗೆ ಯಾವುದೇ ತಾರತಮ್ಯ ಮಾಡದೆ ಕೋವಿಡ್ ಲಸಿಕೆ ನೀಡಿ, ಅಭೂತಪೂರ್ವ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರಿಗೆ, ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನದ ಅಂಗವಾಗಿ ಇಂದು ಎಣ್ಮಕಜೆ ಪಂಚಾಯತ್ ಬಿಜೆಪಿ 183,184 ಬೂತ್ ಪರವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಧಾರ್ಮಿಕ ಮುಂದಾಳು ಕೂಟೇಲು ಕೇಶವ ಪ್ರಸಾದ್ ಭಟ್ ಇವರು ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗವನ್ನು ಅಭಿನಂದಿಸಿ ಮಾತನಾಡಿದರು. ಸಂಕಷ್ಟ ಸಮಯದಲ್ಲಿ ಕೇರಳ ಕರ್ನಾಟಕ ಭೇದ ನೋಡದೆ ನೀವು ಮಾಡಿದ ಸೇವೆ ಸದಾ ಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ಕೇಪು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ರಾಘವ ಮಣಿಯಾಣಿ ಸಾರಡ್ಕ, ಬಿಜೆಪಿ ಅಡ್ಯನಡ್ಕ ಬೂತ್ ಅಧ್ಯಕ್ಷ ಶ್ರೀ ಕೃಷ್ಣ ಮಣಿಯಾಣಿ, ಬಿಜೆಪಿ ಸಾಯ ಬೂತ್ ಕಾರ್ಯದರ್ಶಿ ಆನಂದ ಬಿ ಉಪಸ್ಥಿತರಿದ್ದರು.