ವಿಟ್ಲ: ಶಾಲೆಗೆ ಹೋದ 14 ವರ್ಷದ ಬಾಲಕಿಯನ್ನು ಅಪಹರಣ ನಡೆಸಿ ಅತ್ಯಾಚಾರ ವೆಸಗಿದ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಸೆಷನ್ಸ್ ನ್ಯಾಯಾಲಯ 12 ವರ್ಷಗಳ ಜೈಲು ಶಿಕ್ಷೆ ಹಾಗೂ 85 ಸಾವಿರ ದಂಡವನ್ನು ವಿಧಿಸಿ ಆದೇಶಿದೆ.
ವಿಟ್ಲ ಸಮೀಪದ ನಿವಾಸಿ 14 ವರ್ಷದ ಅಪ್ರಾಪ್ತ ಬಾಲಕಿ ೨೦೧೯ರ ಜು.೨೫ರಂದು ಶಾಲೆಗೆ ಹೋದವಳು ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ಮುಂದಾದ ಸಂದರ್ಭ ಬಾಲಕಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಬಾಲಕಿ ಮೇಲೆ ಅತ್ಯಾಚಾರವಾಗಿದ್ದು, ಬೆಳಕಿಗೆ ಬಂದಿತ್ತು. ವಿಟ್ಲ ಸಮೀಪದ ನಿವಾಸಿ ಬಾಲಕೃಷ್ಣ (25) ಆರೋಪಿಯಾಗಿದ್ದು, ಪೊಕ್ಸೋ ಹಾಗೂ ಅಪಹರಣ ಪ್ರಕರಣ ದಾಖಲಿಸಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ವೃತ್ತ ನಿರೀಕ್ಷಕರಾಗಿದ್ದ ಟಿ. ಡಿ. ನಾಗಾರಾಜ್ ಶಿವಮೊಗ್ಗ ನಡೆಸಿದ್ದರು.
ಕಲಂ ೩೭೬ರಲ್ಲಿ ೭ ವರ್ಷ ಶಿಕ್ಷೆ ಹಾಗೂ ಕಲಂ ೩೬೩ರಲ್ಲಿ ೫ವರ್ಷ ಶಿಕ್ಷೆಯನ್ನು ಘೋಷಣೆ ಮಾಡಿದ್ದು, ೮೫ ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶಿದೆ. ದಂಡ ಪಾವತಿಸಲು ತಪ್ಪಿದಲ್ಲಿ ೩ ತಿಂಗಳ ಜೈಲು ಶಿಕ್ಷೆಯನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಿ ಪರವಾಗಿ ವಕೀಲ ವೆಂಕಟ್ರಮಣ ಸ್ವಾಮಿ ವಾದಿಸಿದ್ದರು.