ಪುತ್ತೂರು: ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿ ಇರುವ ಮಾಹಿತಿ ದೊರೆತು ಸಾರ್ವಜನಿಕರು ಮನೆಯ ಮುಂಭಾಗ ಸೇರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ನಡೆದಿದ್ದು,
ಈ ಬಗ್ಗೆ ತಿಳಿಯುತ್ತಿದಂತೆ ಅನ್ಯಕೋಮಿನ ಯುವಕನೋರ್ವನ ಮನೆ ಬಳಿ ಸಾರ್ವಜನಿಕರು ದೌಡಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು, ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ಮನೆಗೆ ಆಗಮಿಸಿದಾಗ ಒಂದು ಗಂಟೆಗಳ ಕಾಲ ಬಾಗಿಲು ತೆಗೆಯದೆ, ನಂತರ ಬಾಗಿಲು ತೆಗೆದಿದ್ದು ಮನೆಯೊಳಗೆ ಹುಡುಕಾಡಿದಾಗ ಯುವತಿ ಮನೆಯಲ್ಲಿ ಇಲ್ಲದೆ ಕಾರಣ ಯುವತಿಯನ್ನು ಬೇರೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದರು.
ಆದರೇ ಈ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದ್ದು, ಮನೆಯ ಕಪಾಟಿನಲ್ಲಿ ಯುವತಿಯನ್ನು ಯುವಕ ಬಚ್ಚಿಟ್ಟಿದ್ದು, ನಂತರ ಆತನ ಸ್ನೇಹಿತರು ಆಕೆಯನ್ನು ಕರೆದೊಯ್ದು ಜಾಲ್ಸೂರಿನಲ್ಲಿ ಬಿಟ್ಟಿದ್ದಾರೆ ಯುವತಿಯನ್ನು ಕಂಡ ಸಾರ್ವಜನಿಕರು ಆಕೆಯನ್ನು ಪ್ರಶ್ನಿಸಿದಾಗ ಆಕೆ ಗೊಡ್ರೆಜ್ ನಲ್ಲಿ ಇದ್ದ ಮಾಹಿತಿ ನೀಡಿದ್ದಾಳೆ ಬಳಿಕ ಅವರು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಯುವತಿ ನಾಪತ್ತೆಯಾಗಿರುವ ಬಗ್ಗೆ ಯುವತಿಯ ಪೋಷಕರು ಆದೂರು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಯುವತಿ ಅಪ್ರಪ್ತೆಯಾಗಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಪಾಟಿನಲ್ಲಿ ಇದ್ದಳು ಎಂದು ಕೆಲವರು ಹೇಳುತ್ತಿದ್ದು. ದಾಳಿಯ ವೇಳೆ ಪೊಲೀಸರು ಮನೆಯ ಪರಿಶೀಲನೆ ನಡೆಸಿದರು ಆಕೆ ಬಳಿಕ ಸಿಕ್ಕಿರುವುದು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.