ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡೆ ಲಾವಣ್ಯ ಬಳ್ಳಾಲ್ ನೇರ ಸವಾಲೆಸಿದಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಜಾರಿ ಸದ್ದು ಮಾಡುತ್ತಿದೆ.
ಈ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಸಖತ್ ಟ್ರೊಲ್ ಆಗುತ್ತಿದೆ. ಹೇಳಿಕೆ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಜರಂಗದಳ, ಇನ್ಯಾರದ್ದೋ ಹಿಂದೂ ಹೆಣ್ಣುಮಕ್ಕಳನ್ನ ಬಾವಿಗೆ ನೂಕಿ ಆಳ ನೋಡಬೇಡಿ. ನಿಮಗೆ ಅಷ್ಟೊಂದು ಅನ್ಯಕೋಮಿನ ಯುವಕರ ಮೇಲೆ ಪ್ರೀತಿ, ಮಮತೆ, ಸದ್ಭಾವನೆ ಇದ್ದರೆ ನಿಮ್ಮ ನಿಮ್ಮ ಮಕ್ಕಳನ್ನ ಅನ್ಯಕೋಮಿನವರೊಂದಿಗೆ ಮದುವೆ ಮಾಡಿಕೊಟ್ಟು ನೀವೇ ಸಮಾಜಕ್ಕೆ ಮಾದರಿಯಾಗಿ. ಅದು ಬಿಟ್ಟು ಬೇರೆ ಯಾರದ್ದೋ ಹಿಂದು ಹೆಣ್ಣುಮಗಳೊಬ್ಬಳು ಮುಸ್ಲಿಮರ ಜಿಹಾದಿಗೆ ಬಲಿಯಾಗುವುದನ್ನು ಹಿಂದೂ ಸಂಘಟನೆಗಳು ತಪ್ಪಿಸುವಾಗ ನಡುವೆ ಬಾಯಿ ಹಾಕಿ ನಿಮ್ಮ ಪ್ರಚಾರದ ವಾಂಛೆ ತೀರಿಸಿಕೊಳ್ಳಬೇಡಿ. ಇಷ್ಟೊಂದು ಲವ್ ಜಿಹಾದ್ ಕೇಸ್ ನಡೆಯುತ್ತಿರುವಾಗ ಒಂದೂ ಮಾತನಾಡದ ನಿಮಗೆ ಇವಾಗ್ಯಾಕೆ ಉರಿಯುವುದು. ನೈತಿಕ ಪೋಲಿಸ್ಗಿರಿ ಎಂದು ಮಂಗಳೂರನ್ನ ತಾಲಿಬಾನಿಗೆ ಹೋಲಿಸುವ ನಿಮಗೆ ಮೊನ್ನೆ ಬೆಂಗಳೂರಲ್ಲಿ ಮುಸ್ಲಿಮರು ಹಿಂದುವಿನ ಮೇಲೆ ದಾಳಿಮಾಡಿದಾಗ ಯಾಕೆ ತುಟಿಬಿಚ್ಚಲಿಲ್ಲ.? ಮೊನ್ನೆ ಮೊನ್ನೆ ಉಳ್ಳಾಲದಲ್ಲಿ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದವ ಹಿಂದೂ ಹುಡುಗಿಯನ್ನ ಮದುವೆಯಾಗಿ ಉಗ್ರಗಾಮಿ ಕೃತ್ಯಕ್ಕೆ ಬಳಸುವ ಯತ್ನದಲ್ಲಿದ್ದಾಗ ಯಾಕೆ ಮಾತನಾಡಲಿಲ್ಲ…
ಸುಳ್ಯದ ಕಟ್ಟೆಕಾರ್ ಲವ್ ಜಿಹಾದ್ ಮ್ಯಾಟರ್ ದಿನಗಟ್ಟಲೆ ಮಾಧ್ಯಮದಲ್ಲಿ ಬಿತ್ತರವಾಯಿತ್ತಲ್ಲ. ನೀವ್ಯಾಕೆ ಮಾತನಾಡಲಿಲ್ಲ. ಮಾತನಾಡಿ ಆ ಲವ್ ಜಿಹಾದ್ ಸಂತ್ರಸ್ಥೆಗೆ ನ್ಯಾಯ ಕೊಡಿಸಲು ಆಗಲಿಲ್ಲ. ನೀವೆಲ್ಲಾ ಸೋ ಕಾಲ್ಡ್ ಮಹಿಳಾ ಹೋರಾಟಗಾರರು…ಇದೆ ಮುಸ್ಲಿಮರು ಸಿಎಎ ಸಮಯದಲ್ಲಿ ಕಲ್ಲು ತೂರಟ ಮಾಡಿ, ಪೋಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿ ಮಂಗಳೂರನ್ನ ಎರಡು ದಿನ ಬಂದ್ ಮಾಡಿದ್ರಲ್ಲಾ ಅವಾಗ ನಿಮಗೆ ಮಂಗಳೂರು ತಾಲೀಬಾನ್ ನ ಹಾಗೇ ಕಾಣಲಿಲ್ವಾ. ಸೆಲೆಕ್ಟೆಡ್ ವಿಷಯಗಳ ವಿರುದ್ಧ ಮಾತನಾಡುವ ಮಹಿಳಾಮಣಿಗಳೇ..ನಿಮ್ಮ ಪ್ರಚಾರದ ನಾಟಕ ನಿಲ್ಲಿಸಿ. ಸುದ್ದಿಯಲ್ಲಿರಬೇಕು, ಇಲ್ಲವಾದಲ್ಲಿ ಜನ ಮರೆತುಬಿಡುತ್ತಾರೆ ಎಂದು ಒಟ್ಟಾರೆ ಮಾತನಾಡಬೇಡಿ.
ಹಿಂದೂ ಸಂಘಟನೆಯವರು ಹತ್ತು ಸಾವಿರ ದುಡಿಯಲು ಯೋಗ್ಯತೆ ಇಲ್ಲದವರು ಎಂದು ಹೇಳುತ್ತೀರಾ… ನಮಗೆ ದುಡಿಯಲು ಯೋಗ್ಯತೆ ಇದೆ, ಅದರ ಜೊತೆಗೆ ದುಡಿದ ಹಣದಲ್ಲಿ ಸಮಾಜಕ್ಕಾಗಿ ಸೇವೆ ಮಾಡಲೂ ಗೊತ್ತಿದೆ. ಹತ್ತು ಹುಡುಗಿಯರಿಗೆ ಮದುವೆ ಮಾಡಿ ತೋರಿಸಿ, ಕಷ್ಟದಲ್ಲಿರುವ ಹಿಂದೂ ಕುಟುಂಬಗಳಿಗೆ ಸಹಾಯ ಮಾಡಿ ತೋರಿಸಿ ಎಂದು ಹೇಳಿದ್ದೀರಿ…ಹಿಂದೂ ಪರಿವಾರ ಸಂಘಟನೆಗಳು ಬೇರೆ ಜಿಲ್ಲೆಗಳಲ್ಲಿ ಗೊತ್ತಿಲ್ಲ, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಂಜೀವಿನಿ ರೀತಿಯ ಹತ್ತು ಹಲವು ಸಮಾಜಪರ ತಂಡಗಳು ದುಡಿದು ತಮ್ಮ ದುಡಿಮೆಯ ಒಂದು ಭಾಗವನ್ನು ಹಿಂದೂ ಸಮಾಜಕ್ಕೆ ಮೀಸಲಿಟ್ಟು ಕೋಟಿಗಟ್ಟಲೆ ಸೇವಾಕಾರ್ಯ ಮಾಡಿವೆ. ಅದರಲ್ಲಿ ಇರುವುದೂ ಇದೇ ಹಿಂದೂ ಸಂಘಟನೆಯ ಹುಡುಗರು. ನಮ್ಮ ಧರ್ಮದ ರಕ್ಷಣೆ ಹೇಗೆ ಮಾಡಬೇಕೆಂದು ನಿಮ್ಮಿಂದ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ. ಧರ್ಮ ರಕ್ಷಣೆಗೆ ದುಡಿದು, ಕೇಸು ಹಾಕಿಸಿಕೊಂಡು ಕೋರ್ಟ್ ಕಚೇರಿಗೆ ಹಣ ವ್ಯಯಿಸಿಯೂ ಗೊತ್ತಿದೆ. ನಿಮ್ಮಿಂದ ಬದುಕು ಕಲಿಯಬೇಕಿಲ್ಲ ಹಿಂದೂ ಸಂಘಟನೆಯವರು. ನೀವೆಷ್ಟೇ ನೈತಿಕ ಪೋಲೀಸ್ ಗಿರಿ ಅದು ಇದು ಎಂದು ಬಾಯಿ ಹರ್ಕೊಂಡರೂ ಹಿಂದೂ ಸಮಾಜದ ಜಾಗೃತಿ ಮಾಡುತ್ತಲೇ ಇರುತ್ತೇವೆ ಎಂದು ಎದುರುತ್ತರ ನೀಡಿದೆ.