ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ತೆಂಗಿನ ಬೆಳೆ ಬೆಳೆಯುವ ರೈತರಿಗಾಗಿಯೇ ಮೊದಲ ಸಂಸ್ಥೆಯೊಂದು ನಿರ್ಮಾಣವಾಗಿದೆ. ಭಾರತ ಸರ್ಕಾರದ ಅನುಮತಿ ಹೊಂದಿದ ಅಧಿಕೃತ ತೆಂಗು ಉತ್ಪಾದಕ ಸಂಸ್ಥೆ ಇದಾಗಿದ್ದು, ತೆಂಗು ಬೆಳೆಯುವ ರೈತರಿಗೆ ಹಾಗೂ ತೆಂಗಿನ ಮರದಿಂದ ಹಿಡಿದು ಕಾಯಿಯವರೆಗೆ ನೂರಾರು ಉತ್ಪನ್ನಗಳು ಸಂಸ್ಥೆಯಿಂದ ಹೊರಬರಲಿದೆ. ಸಂಸ್ಥೆಗೆ ರೈತರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.
ತೆಂಗು ಬೆಳೆಗಾರರಿಗೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಜತೆಗೆ ಉತ್ತಮ ಧಾರಣೆ ನೀಡುವ ಕಾರ್ಯ ಮಾಡಲಾಗುತ್ತದೆ. ಸಂಸ್ಥೆಯಲ್ಲಿ ನೋಂದಣಿಯಾದ ರೈತರ ಆರೋಗ್ಯದ ವಿಚಾರದಲ್ಲಿ ವಿವಿಧ ಆರೋಗ್ಯ ಸೌಲಭ್ಯಗಳನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದೆ. ತೆಂಗಿನ ಮರದ ಬೇರಿನಿಂದ ಹಿಡಿದು ತೆಂಗಿನ ಕಾಯಿವರೆಗೆ ನೂರಾರು ಉತ್ಪನ್ನಗಳು ಈ ಸಂಸ್ಥೆಯ ಮೂಲಕ ಹೊರಬರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಉದ್ಯೋಗ ಸೃಷ್ಚಿಯಾಗಲಿದೆ ಎಂದು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಜ್ಞಾನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸದಸ್ಯತ್ವ ಹೊಂದಿದ ರೈತರಿಗೆ ಕೆಂದ್ರ ಸರ್ಕಾರದ ಸಹಯೋಗದಲ್ಲಿ ರಸಗೊಬ್ಬರಗಳನ್ನು ಶೇ.10 ರಿಂದ 15ರಷ್ಟು ರಿಯಾಯಿತಿ ದರದಲ್ಲಿ ಪೂರೈಕೆ ಮಾಡಲಾಗುತ್ತದೆ. ಹತ್ತು ವರ್ಷ ಮೇಲ್ಪಟ್ಟ ಮರಗಳಿಗೆ ಬೆಳೆ ನಷ್ಟ ವಿಮೆಯನ್ನು ನೀಡಲಾಗುತ್ತದೆ. ತೆಂಗು ಬೆಳೆಯುವ ರೈತರಿಗೆ ಉತ್ತಮ ಸಸಿಗಳನ್ನು ಸರ್ಕಾರದ ಸಹಯೋಗದಲ್ಲಿ ಸಬ್ಸಿಡಿ ರೂಪದಲ್ಲಿ ಕಂಪನಿ ಕಡೆಯಿಂದ ಒದಗಿಸಲಾಗುವುದು ಎಂದು ವಿಟ್ಲ ಕೇಂದ್ರ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆ ತೆಂಗಿನಕಾಯಿ ಮತ್ತು ತೆಂಗಿನಮರದಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಹಿನ್ನಲೆಯಲ್ಲಿ ಸುಮಾರು 1 ಲಕ್ಷ ತೆಂಗಿನಕಾಯಿಯಷ್ಟು ದಿನವೊಂದಕ್ಕೆ ಖರೀದಿಸುವ ಗುರಿ ಇಟ್ಟುಕೊಂಡಿದ್ದು, ಜಿಲ್ಲೆಯ ಎಲ್ಲಾ ಸೊಸೈಟಿಗಳ ಮೂಲಕ ಖರೀದಿಸುವ ಯೋಜನೆಯನ್ನು ಹಾಕಿಕೊಂಡಿದೆ. ಜಿಲ್ಲೆಯ ಎಲ್ಲಾ 8 ತಾಲೂಕುಗಳಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಸದಸ್ಯತ್ವ ನೊಂದಣಿ ಕಾರ್ಯ ಆರಂಭಿಸಿದ್ದಾರೆ. ಸಂಸ್ಥೆಯು ಕೇವಲ 10 ದಿನಗಳಲ್ಲಿ 500 ಮಂದಿ ಶೇರುದಾರ ಸದಸ್ಯರನ್ನು ಪಡೆದಿದ್ದು, 5ಲಕ್ಷ ಸದಸ್ಯತ್ವ ಮಾಡುವ ಜತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತ ವಿಶೇಷತೆ:
- ಪ್ರಪ್ರಥಮ ಬಾರಿಗೆ ರೈತರಿಗೆಂದೇ ಹೊಸ ಯೋಜನೆ ತಂದ ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ಕೃಷಿಕರ ಮೊದಲನೆಯ ಕಂಪನಿ.
- ತೆಂಗು ಬೆಳೆಯುವ ರೈತರಿಗೆ ಅನಿಯಮಿತ ಸೌಲಭ್ಯ ಕೊಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಬಂದಿದೆ. ಇಲ್ಲಿ ತಾನು ಬೆಳೆದ ಬೆಳೆಗೆ ಉತ್ತಮ ರೀತಿಯ ದರವನ್ನು ನೀಡಲಾಗುವುದು ಮತ್ತು ಬೇರೆ ಬೇರೆ ವಿಮೆ ಸೌಲಭ್ಯಗಳನ್ನು ನೀಡಲಾಗುವುದು.
ನೋಂದಾಯಿಸಿಕೊಂಡ ರೈತರಿಗೆ ಸಿಗುವ ವಿಶೇಷ ಸೌಲಭ್ಯಗಳು:
- LRP (ಸ್ಥಳೀಯ ಸಂಪನ್ನ್ಮೂಲ ವ್ಯಕ್ತಿ) ಸಿಬ್ಬಂದಿಯ ಮೂಲಕ ನೋಂದಣಿ ಮಾಡಿಕೊಂಡ ರೈತರಿಗೆ ಒಳರೋಗಿ ಆರೋಗ್ಯ ಸೌಲಭ್ಯ ಯೋಜನೆಯಲ್ಲಿ ರೂ. 35000 ತನಕ ವರ್ಷಕ್ಕೆ ಒಂದು ಕೃಷಿ ಕುಟುಂಬಕ್ಕೆ ಪ್ರತಿಷ್ಠಿತ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಂಸ್ಥೆಯು ಅರೋಗ್ಯ ಭಾಗ್ಯ ನೀಡುತ್ತದೆ.
- ರೈತರ ಅಸಹಜ ಸಾವಿಗೆ (Accidental Death) ಒಂದು ಕೃಷಿ ಕುಟುಂಬಕ್ಕೆ ರೂ. 1 ರಿಂದ 2 ಲಕ್ಷ ತನಕ ಸರಕಾರವು ಕಂಪೆನಿಯ ಜೊತೆಗೆ ವಿಮೆ ಸೌಲಭ್ಯವನ್ನು ನೀಡುತ್ತದೆ.
- 10 ರಿಂದ 15 ಶೇಕಡ(%) ರಿಯಾಯಿತಿ ದರದಲ್ಲಿ ತೆಂಗು ರೈತರಿಗೆ ಕೇಂದ್ರ ಸರಕಾರದ ಸಹಯೋಗದಿಂದ ರಸಗೊಬ್ಬರವನ್ನು ಕಂಪನಿಯು ರೈತರಿಗೆ ಪೂರೈಕೆ ಮಾಡುತ್ತದೆ.
- ಯಾವುದೇ ಸಮಯದಲ್ಲಿ ತೆಂಗಿನ ಮರಗಳು ಪ್ರಕೃತಿ ವಿಕೋಪಕ್ಕೆ ಮತ್ತು ನುಸಿಗಳ ಕಾಟಕ್ಕೆ ಹಾಗೂ ಕಾಡು ಪ್ರಾಣಿಗಳ ದಾಳಿಗೆ ತುತ್ತಾದರೆ (ಹತ್ತು ವರ್ಷದಿಂದ ಮೇಲಿನ) ತೆಂಗಿನ ಮರಗಳಿಗೆ ಬೆಳೆ ನಷ್ಟ ವಿಮೆಯನ್ನು ನೀಡುತ್ತದೆ.
- ಒಂದು ರೈತನಿಗೆ ತಲಾ 750 ರೂಪಾಯಿ ಶೇರ್ ಬಂಡವಾಳ ಹಾಗೂ 250 ರೂಪಾಯಿ ಕಂಪನಿಯ ಸದಸ್ಯತ್ವವನ್ನು ಹೊಂದಲು ಅರ್ಹರಾಗಿರುತ್ತಾರೆ.
- ಸದಸ್ಯತ್ವ ಪಡೆದ ರೈತನು ತಾನು ಬೆಳೆದ ತೆಂಗಿನ ಕಾಯಿಯನ್ನು ಕಂಪನಿಗೆ ಕೊಟ್ಟಲ್ಲಿ ಕಂಪನಿಯು ರೈತನಿಗೆ ಉತ್ತಮ ರೀತಿಯ ದರವನ್ನು ಕೊಡಲು ಬದ್ಧವಾಗಿರುತ್ತದೆ.
- ತೆಂಗು ಬೆಳೆಯುವ ರೈತನು ಅತೀ ಬಡವರಾಗಿದ್ದರೆ (ಕಾನೂನು ರೀತಿಯ ದಾಖಲೆ ಹೊಂದಿದ್ದರೆ) ಕಂಪೆನಿಯು ಆ ಕೃಷಿ ಕುಟುಂಬಕ್ಕೆ ವಿವಿಧ ರೀತಿಯ ಸೌಲಭ್ಯ ಕೊಡಲು ಯಾವುದೇ ಸಮಯದಲ್ಲಿ ಬದ್ಧವಾಗಿರುತ್ತದೆ.
- ರೈತನು ತೆಂಗು ಬೆಳೆಯುವ ಉತ್ಸಾಹವಿದ್ದರೆ ಉತ್ತಮ ರೀತಿಯ ತೆಂಗು ಸಸಿಗಳನ್ನು ಸರಕಾರದ ಸಹಯೋಗದೊಂದಿಗೆ ಸಬ್ಸಿಡಿ ರೂಪದಲ್ಲಿ ಕಂಪನಿಯು ನೀಡುತ್ತದೆ.
- ರೈತನು ರೈತ ಕಂಪನಿಗೆ ಕೊಡುವ ತೆಂಗಿನಕಾಯನ್ನು ಕಂಪನಿಯು ವಿವಿಧ ರೀತಿಯಲ್ಲಿ ಮೌಲ್ಯವರ್ಧನೆ (Processing) ಮಾಡುತ್ತದೆ. ಮೌಲ್ಯವರ್ಧನೆ ಮಾಡಿದ ತೆಂಗಿನಕಾಯಿ ಉತ್ಪನ್ನಗಳನ್ನು ತೆಂಗು ರೈತ ಕಂಪನಿಯು ವಿವಿಧ ದೇಶಗಳಿಗೆ ರಫ್ತು ಮಾಡುವ ಉದ್ದೇಶವನ್ನು ಹೊಂದಿರುತ್ತದೆ.
- ರೈತ ಕಂಪನಿಯಲ್ಲಿ ಉತ್ಪನ್ನಗೊಳಿಸಿದ ತೆಂಗಿನಕಾಯಿಯ ಉತ್ಪನ್ನಗಳಿಗೆ ತೆಂಗು ರೈತ ಕಂಪನಿಯಲ್ಲಿ ಸದಸ್ಯತ್ವವನ್ನು ಹೊಂದಿದವನಿಗೆ 10 ರಿಂದ 15% ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ನೀಡಲು ಉದ್ದೇಶವನ್ನು ಹೊಂದಿರುತ್ತದೆ.
ಬ್ಯಾಂಕಿಂಗ್ ಕ್ಷೇತ್ರ ಸೌಲಭ್ಯಗಳು:
- ರೈತನಿಗೆ ಹಡಿಲು ಭೂಮಿ ಇದ್ದರೆ ರೈತ ಕಂಪನಿಯು ರೈತನ ದಾಖಲಾತಿಗಳನ್ನು ನೋಡಿ ರೈತರಿಗೆ ಸಬ್ಸಿಡಿ ರೂಪದಲ್ಲಿ ಉತ್ತಮ ದರ್ಜೆಯ ತೆಂಗಿನ ಸಸಿಗಳು ಹಾಗೂ ನೀರಿನ ವ್ಯವಸ್ಥೆಯನ್ನು ಮಾಡುವ ಮಾದರಿ ಯೋಜನೆಗಳನ್ನು ಇಟ್ಟುಕೊಂಡಿದೆ.
- ತೆಂಗಿನ ಮರ ಹತ್ತಲು ರೈತನಿಗೆ ಬೇಕಾಗುವ ಉತ್ತಮ ದರ್ಜೆಯ ತರಬೇತಿಯನ್ನು ನೀಡಲಾಗುತ್ತದೆ.
- ತೆಂಗಿನ ತೋಟವನ್ನು ಯಾವ ರೀತಿಯಲ್ಲಿ ನಿರ್ವಹಣೆ ಮಾಡಲು ಹಾಗೂ ಸಮಯಕ್ಕೆ ತಕ್ಕ ಹಾಗೇ ತೆಂಗಿನ ತೋಟ ವನ್ನು ಉನ್ನತಿಕರಿಸಲು ಕಂಪೆನಿಯು ಉತ್ತಮ ರೀತಿಯ ವಿಜ್ಞಾನಿಗಳೊಂದಿಗೆ ತರಬೇತಿ ನೀಡುತ್ತದೆ.
- ರೈತನಿಗೆ ಕೃಷಿ ಮಾಡಲು ಅತಿಮುಖ್ಯವಾದ ಮಣ್ಣು ಪರೀಕ್ಷೆಯನ್ನು (Soil Test) ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿಯು ಪ್ರತಿ ತಾಲೂಕಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರವನ್ನು ತೆರೆಯುವ ಮಾದರಿ ಯೋಜನೆಯನ್ನು ಹೊಂದಿರುತ್ತದೆ.
ನೋಂದಾಯಿಸಿಕೊಳ್ಳುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೂಡಲೇ ಸಂಪರ್ಕಿಸಿರಿ:
Email: southcanarafpc@gmail.com, ದೂರವಾಣಿ: 7338567763, 7899367763
ಕೇಂದ್ರ ಕಛೇರಿ: ವಿಟ್ಲ, #1/101 CPCRI ಬಳಿ, ಮಂಗಳ ಮಂಟಪ, ಪುತ್ತೂರು ರೋಡ್, ವಿಟ್ಲ, ದಕ್ಷಿಣ ಕನ್ನಡ-574243