ವಿಟ್ಲ: ಬೊಬ್ಬೆಕೇರಿ-ದೇವಸ್ಥಾನ ಸಂಪರ್ಕ ರಸ್ತೆಯ ಮೀನು ಮಾರುಕಟ್ಟೆ ಸಮೀಪ ಖಾಸಗಿ ವ್ಯಕ್ತಿಯೋರ್ವ ರಸ್ತೆಯನ್ನು ಅತಿಕ್ರಮಣ ಮಾಡಿರುವುದಾಗಿ ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬೊಬ್ಬೆಕೇರಿ-ದೇವಸ್ಥಾನ ಸಂಪರ್ಕ ರಸ್ತೆಯ ಮೀನು ಮಾರುಕಟ್ಟೆ ಸಮೀಪ ಖಾಸಗಿ ವ್ಯಕ್ತಿಯೋರ್ವ ಅತಿಕ್ರಮಣ ಮಾಡುವ ಮೂಲಕ ರಸ್ತೆಯನ್ನೇ ಅತಿಕ್ರಮಣ ಮಾಡಿರುವುದಾಗಿ ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದು, ಪ್ರತಿನಿತ್ರ ನೂರಾರು ವಾಹನಗಳು ಓಡಾಡುತ್ತಿರುವ ಈ ರಸ್ತೆಯು ಆಸ್ಪತ್ರೆ, ದೇವಸ್ಥಾನ, ಪಳಿಕೆ ಹಿಂದೂ ರುದ್ರಭೂಮಿಯಲ್ಲದೇ ಇಲ್ಲಿನ ಐನೂರಕ್ಕೂ ಹೆಚ್ಚು ಕುಟುಂಬಗಳಿಗೆ ಆಧಾರವಾಗಿದೆ.
ಇದೀಗ ರಸ್ತೆಯನ್ನು ಖಾಸಗಿ ವ್ಯಕ್ತಿಯೋರ್ವ ಅತಿಕ್ರಮಿಸಿ ಕೊಂಡಿದ್ದು, ಈ ಬಗ್ಗೆ ಸಾರ್ವಜನಿಕರು ಅತಿಕ್ರಮಣದ ವಿರುದ್ಧ ಪ.ಪಂ.ಗೆ ದೂರು ನೀಡಿದ್ದರು. ಆದರೇ ಅಧಿಕಾರಿಗಳಾಗಲೀ, ಜನ ಪ್ರತಿನಿಧಿಗಳಾಗಲೀ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಜನ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಸಾರ್ವಜನಿಕರ ಮನವಿಗೆ ಸ್ಪಂದಿಸಬೇಕಾಗಿದೆ.