ಪ್ರಸಕ್ತ ಸನ್ನಿವೇಶದಲ್ಲಿ ಔಷಧಿಗಳೆನ್ನುವುದು ಮಾನವ ಬದುಕಿನ ಒಂದು ಭಾಗವೇ ಸರಿ.. ಭಾಗಶಃ ಆರೋಗ್ಯದ ಗುಟ್ಟು ಇದೇ ಔಷಧಿಗಳ ಸಾಲು.. ಯಾವುದೇ ರೀತಿಯ ಆರೋಗ್ಯ ವಿಚಾರಕ್ಕೂ ಶರೀರಕ್ಕೆ ಒಪ್ಪುವಂತೆ, ವೈದ್ಯರ ಶಿಫಾರಸ್ಸಿಗೆ ತಕ್ಕನಾದ ಮೌಲ್ಯಯುತ ಔಷಧಿಗಳನ್ನು ಒದಗಿಸಿಕೊಡುವ ನೂತನ ಮಳಿಗೆ ಮಮತ ಉಮೇಶ್ ಗೌಡ ಮಾಲಕತ್ವದಲ್ಲಿ ಆಲಂಕಾರು ಜನತೆಗೆ ಔಷಧಿ ಸೇವೆಯನ್ನು ನೀಡಲು ಸನ್ನದ್ಧವಾಗಿದೆ.
ಇದೇ ಆಲಂಕಾರಿನ ಶ್ರೀ ದುರ್ಗಾ ಟವರ್ಸ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮೆಡಿಕಲ್ಸ್. ನೂತನ ಮೆಡಿಕಲ್ ನ ಶುಭಾರಂಭ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಮಾಲಕರ ಅತ್ತೆಯವರಾದ ದೇಜಮ್ಮ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಟ್ಟಡದ ಮಾಲಕ ರಾಧಾಕೃಷ್ಣ ರೈ, ಮಾಜಿ ಸೈನಿಕ ರಾಧಾಕೃಷ್ಣ ಎ, ರುಕ್ಮಯ ಗೌಡ ಸೇರಿ ಹಲವರು ಉಪಸ್ಥಿತರಿದ್ದರು.