ಪುತ್ತೂರು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳು ದುರುಪಯೋಗವಾಗುವ ಸಾಧ್ಯತೆ ಇದೆ ಆದ್ದರಿಂದ ಜಾಗರೋಕರಾಗಿರಿ ಎಂದು ಅಧಿಕೃತ ಸೈಬರ್ ಕ್ರೈಂ ಇಂಟರ್ವೆನ್ಷನ್ ಅಧಿಕಾರಿ ಕುಮಾರಿ ಪ್ರಣಿತಾ ಅವರು ತಿಳಿಸಿದರು.ರೋಟರಾಕ್ಟ್ ಕ್ಲಬ್ ಪುತ್ತೂರು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇದರ ಜಂಟಿ ಆಶ್ರಯದಲ್ಲಿ ರೋಟರಿ ಜಿಎಲ್ ಸಭಾಂಗಣದಲ್ಲಿ ಸೈಬರ್ ಕ್ರೈಮ್ ಬಗ್ಗೆ ಜನಜಾಗ್ರತಿ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯಾದ್ಯಂತ ಅನೇಕ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಿರುವ ನಿವೃತ್ತ ಸೇನಾನಿ ಶ್ರೀ ಶಿವಪ್ಪ ಗೌಡ ಹಾಗೂ ಶ್ರೀಮತಿ ಶೇಷವೆಣಿ ಅವರ ಸುಪುತ್ರಿ ಕುಮಾರಿ ಪ್ರಣಿತಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಸೋಶಿಯಲ್ ಮೀಡಿಯಾ ನಡೆಸುವ ವಿವಿಧ ಸ್ಪರ್ಧೆಗಳಿಗೆ ನಾವು ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುತ್ತೇವೆ ಆವುಗಳ ದುರುಪಯೋಗ ಆಗದಂತೆ ಪ್ರೈವೆಸಿ ಸೆಟ್ಟಿಂಗ್ ಮಾಡಬೇಕು. ನಮ್ಮ ಇಮೇಲ್ ಹಾಗೂ ಫೇಸ್ಬುಕ್ ಇದರ ಪಾಸ್ವರ್ಡ್ಗ ಹ್ಯಾಕ್ ಆಗದಂತೆ ಸ್ಟ್ರಾಂಗ್ ಪಾಸ್ ವರ್ಡ್ ಸೆಟ್ ಮಾಡಿದರೆ ಉತ್ತಮ. ನಮ್ಮ ಮಕ್ಕಳ ಮೊಬೈಲ್ ನಲ್ಲಿ ಏನೆಲ್ಲ ಸಂಭಾಷಣೆಗಳು ನಡೆಯುತ್ತದೆ? ಯಾವ ಯಾವ ವೆಬ್ಸೈಟ್ಗಳನ್ನು ವೀಕ್ಷಿಸುತ್ತಾರೆ? ಎಂದು ಪೋಷಕರು ತಿಳಿದುಕೊಳ್ಳುಬೇಕು.
ಮಕ್ಕಳು ಆನ್ಲೈನ್ ಆಟದ ದುಶ್ಚಟಕ್ಕೆ ಮಕ್ಕಳು ಬಲಿಯಾಗದಂತೆ ಜಾಗರೂಕರಾಗಿರಬೇಕು ಎಂದು ತಿಳಿಸಿದ ಅವರು ಇಂಟರ್ನೆಟ್ ಪ್ರಪಂಚದ ಅಚ್ಚರಿಯ ಹಾಗೂ ಆಶ್ಚರ್ಯಕರ ಅನೇಕ ಸಂಗತಿಗಳ ಬಗ್ಗೆ ವಿವರಣೆ ನೀಡಿದರು.ಸಂಜೀವ ಶೆಟ್ಟಿ ಜವಳಿ ಮಳಿಗೆಯ ಸೂರಜ್ ಶೆಟ್ಟಿ, ದರ್ಬೆ ಶ್ರೀ ಲಕ್ಷ್ಮಿ ವಾಣಿಜ್ಯ ಸಂಕೀರ್ಣದ ಮಾಲಕರಾದ ಭರತ್ ಪೈ, ಪದ್ಮಶ್ರೀ ಸಂಸ್ಥೆಯ ರತ್ನಾಕರ ರೈ ಮುಂತಾದವರು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾಹಿತಿ ಪಡೆದರು.ರೋಟರಿ ಯುವ ಅಧ್ಯಕ್ಷ ಹರ್ಷಕುಮಾರ ರೈ ಅತಿಥಿಗಳನ್ನು ಸ್ವಾಗತಿಸಿದರು.ರೋಟರಾಕ್ಟ್ ಸದಸ್ಯ ಹರೀಶ್ ಅವರು ಪ್ರಾರ್ಥಿಸಿದರು.ಸಂಪನ್ಮೂಲ ವ್ಯಕ್ತಿ ಪರಿಚಯ ಶ್ರೀಕಾಂತ್ ಅವರು ನೆರವೇರಿಸಿದರು. ರೋಟರಾಕ್ಟ್ ಅಧ್ಯಕ್ಷ ನವೀನ್ ಕುಮಾರ್ ಬನ್ನೂರು ಅವರು ಧನ್ಯವಾದ ಸಮರ್ಪಣೆ ಗೈದರು. ಕಾರ್ಯಕ್ರಮದ ಸಂಯೋಜಕರಾದ ರೋಟರಿ ಯುವದ ಕಾರ್ಯದರ್ಶಿ ಉಮೇಶ್ ನಾಯಕ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ರೋಟರಾಕ್ಟ್ ಸಭಾಪತಿ ಶ್ರೀಧರ ಆಚಾರ್ಯ ಹಾಗೂ ಕಾರ್ಯದರ್ಶಿ ಹಿಮಾಂಶು ಕುಮಾರ್ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಬಳಿಕ ಸಂಪನ್ಮೂಲ ವ್ಯಕ್ತಿ ಕುಮಾರಿ ಪ್ರಣೀತಾ ಅವರಿಗೆ ಅಭಿನಂದಿಸಲಾಯಿತು.