ಪುತ್ತೂರು: ನಗರಸಭಾ ವ್ಯಾಪ್ತಿಯ ಬನ್ನೂರು ಶಾಲೆಯ ಬೂತ್ ಗೆ ಸಂಬಂಧಿಸಿದ ಕಾರ್ಯಕರ್ತರ ಸಭೆಯು ಬನ್ನೂರು ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ್ ಜೈನ್ ರ ನೇತೃತ್ವದಲ್ಲಿ ಮಹಾಬಲ ಪೂಜಾರಿಯವರ ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ಬ್ಲಾಕ್ ಉಪಾಧ್ಯಕ್ಷ ರುಗಳಾದ ಮೌರಿಸ್ ಮಸ್ಕೇರೇನಸ್, ಶ್ರೀಮತಿ ವಿಶಾಲಾಕ್ಷಿ ಬನ್ನೂರು,ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ,ಕಾರ್ಯದರ್ಶಿ ರೋಶನ್ ರೈ ಬನ್ನೂರು,ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಶಾರದಾ ಅರಸ್, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರ, ರಾಜ್ಯ ಕೊಂಕಣಿ ಅಕಾಡಮಿಯ ಮಾಜಿ ಸದಸ್ಯ ದಾಮೋದರ್ ಭಂಡಾರ್ಕರ್.

ಮಾಜಿ ಪುರಸಭಾ ಸದಸ್ಯ ದೇವದಾಸ ಶೆಟ್ಟಿ, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಾದ ಕಿರಣ್ ಡಿ ಸೋಜಾ, ಸಂತೋಷ್ ಗ್ರೇಗರಿ ಲೋಬೊ (ಸತ್ತು ), ಅಹ್ಮದ್ ಬನ್ನೂರು, ರಾಘವೇಂದ್ರ,ವಿಜಯ ಆರ್ ಕೆ,ಶ್ರೀಮತಿ ಜೆಸಿಂತ ಡಿ ಸೋಜಾ,ವಿಜಿತ್ ನೆಕ್ಕಿಲ್, ಕಿರಣ್ ಹೆಗ್ಡೆ, ಶೀನಪ್ಪ ಪೂಜಾರಿ, ಕಿರಣ್ ನಾಯ್ಕ್,ತುಕ್ರಪ್ಪ ಪೂಜಾರಿ,ರಂಜಿತ್, ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ಎರಡು ಬೂತ್ ಗಳಿಗೆ ಮಹಾಬಲ ಪೂಜಾರಿ ಹಾಗೂ ಅಹ್ಮದ್ ಬನ್ನೂರು ರವರ ಅಧ್ಯಕ್ಷತೆಯಲ್ಲಿ ಬೂತ್ ಸಮಿತಿ ರಚನೆ ಮಾಡಲಾಯಿತು.