ಉಪ್ಪಿನಂಗಡಿ: ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡಲು ಆಲಂಕಾರು ಪರಿಸರದಿಂದ ಗೋವುಗಳನ್ನು ಕದ್ದು ಸಾಗಿಸುತ್ತಿದ್ದ ವೇಳೆ ನೆಲ್ಯಾಡಿ ಗ್ರಾಮದ ತೋಟ ಎಂಬಲ್ಲಿ ಆಪೆ ರಿಕ್ಷಾವು ಪಲ್ಟಿಯಾದ ಪ್ರಕರಣದಲ್ಲಿ ಪರಾರಿಯಾಗಿದ್ದ ಪ್ರಧಾನ ಆರೋಪಿ ಸಫೀಕ್ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಆಲಂಕಾರಿನಿಂದ ದನ ಮತ್ತು ಹೋರಿಯನ್ನು ಕದ್ದು ಅಮಾನವೀಯವಾಗಿ ಕೈ ಕಾಲನ್ನು ಕಟ್ಟಿ ಹಾಕಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ವೇಳೆ ಆಪೆ ರಿಕ್ಷಾವು ಅಪಘಾತಕ್ಕೀಡಾಗಿತ್ತು. ಈ ವೇಳೆ ಸ್ಥಳಕ್ಕೆ ಸ್ಥಳೀಯರು ಆಗಮಿಸಿದಾಗ ರಿಕ್ಷಾ ಚಾಲಕ ಸಫೀಕ್ ರಿಕ್ಷಾದೊಂದಿಗೆ ಪರಾರಿಯಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಕೊಕ್ಕಡದ ಗುರುಪ್ರಸಾದ್ ನನ್ನು ಅಂದೇ ಪೊಲೀಸರು ಬಂಧಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿ ಸಫೀಕ್ ನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.