ಪುತ್ತೂರು: ಸುಮಾರು ವರ್ಷಗಳಿಂದ ಅಭಿವೃದ್ಧಿ ಕಾಣದೇ ನಿರ್ಲಕ್ಷ್ಯಕ್ಕೆ ಒಳಗಾಗಿ ವಾಹನ ಸಂಚಾರ, ನಡೆಯುವುದಕ್ಕೂ ಆಗದೆ ಇರುವಂತಹ ವಾರ್ಡ್ ನ ಮುಖ್ಯ ರಸ್ತೆಯನ್ನು ಸಮಿತಿಯ ಪದಾಧಿಕಾರಿಗಳ ಮತ್ತು ಸಮಿತಿಯ ಸದಸ್ಯರ/ಗ್ರಾಮಸ್ಥರ ಪಾಲುದಾರಿಕೆಯಲ್ಲಿ ಸ್ಥಳೀಯ ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಮತ್ತು ಬೂತ್ ಅಧ್ಯಕ್ಷರ ನೇತೃತ್ವದಲ್ಲಿ ಸುಮಾರು 20 ಸಾವಿರ ರೂಪಾಯಿ ವೆಚ್ಚದಲ್ಲಿ ಕಾರ್ಯಕರ್ತರ ಶ್ರಮದಾನದ ಮೂಲಕ ದುರಸ್ಥಿ ಮಾಡಿದರು.

ಈ ಸಂದರ್ಭದಲ್ಲಿ ವಾರ್ಡ್ ಸಮಿತಿಯ ಅಧ್ಯಕ್ಷರಾದ ಜಯಾನಂದ ಬಂಗೇರ ತಾರಿಗುಡ್ಡೆ,ಕಾರ್ಯದರ್ಶಿಗಳಾದ ಬಾಲಚಂದ್ರ ಸಿದ್ಯಾಲ ಸ್ಥಳೀಯ ನಗರಸಭೆಯ ಸದಸ್ಯರಾದ ಸುಂದರ ಪೂಜಾರಿ ಬಡಾವು, ಅಶೋಕ್ ಹಾರಾಡಿ,ರವೀಶ್ ತಾರಿಗುಡ್ಡೆ,ಜಯೇಶ್ ಕುಮಾರ್ ತಾರಿಗುಡ್ಡೆ,ಪ್ರವೀಣ್ ಕೇಪುಳು,ಅಮೃತ ಕೃಷ್ಣ,ನಾರಾಯಣ ಪೂಜಾರಿ ತಾರಿಗುಡ್ಡೆ,ವಿನೋದ್ ಹೆಗ್ಡೆ ತಾರಿಗುಡ್ಡೆ,ಗೋಪಾಲ ಕೃಷ್ಣ ಸಿದ್ಯಾಲ,ಪುರುಷೋತ್ತಮ ಬಂಗೇರ ತಾರಿಗುಡ್ಡೆ,ಗಣೇಶ್ ತಾರಿಗುಡ್ಡೆ,ತಿರುಮಲೇಶ್ವರ ಭಟ್ ತಾರಿಗುಡ್ಡೆ,ಶಿವರಾಮ್ ಭಟ್ ತಾರಿಗುಡ್ಡೆ, ನವೀನ್ ಕುಲಾಲ್, ಕೇಶವ ಪಡ್ನೂರು, ಹರ್ಷಿತ್ ಆಚಾರ್ಯ ಶಾಂತಿನಗರ ಮುಂತಾದವರು ಭಾಗವಹಿಸಿದ್ದರು.




