ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಕಂಪನಿ ನಿಯಮಿತ ಲಯನ್ಸ್ ಕ್ಲಬ್ ಬಂಟ್ವಾಳ ಯಲ್.ಯನ್. ಯಸ್.ಯಂ. ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ಕೆ.ಎಂ. ಸಿ. ಹಾಸ್ಪಿಟಲ್ ಅತ್ತಾವರ ಮಂಗಳೂರು ಇದರ ಸಂಯುಕ್ತ ಆಶ್ರಯದೊಂದಿಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಅ.2 ರಂದು ಲಯನ್ಸ್ ಕ್ಲಬ್ ಬಂಟ್ವಾಳ ರೈಲ್ವೆಸ್ಟೇಷನ್ ರೋಡ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಬಿ. ವಸಂತ ಬಾಳಿಗ ಶಿಬಿರವನ್ನು ಉದ್ಘಾಟಿಸಿದರು. 180ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಬಿ. ವಸಂತ ಬಾಳಿಗ,ಕೆ. ಎಂ.ಸಿ ಆಸ್ಪತ್ರೆಯ ಡಾ. ರಕ್ಷಿತ್, ಯಲ್. ಯನ್. ಯಸ್. ಯಂ. ಟ್ರಸ್ಟ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಯಂ. ಪ್ರಸಾದ್ ಶೆಟ್ಟಿ, ಕುಸುಮಾಧರ, ಯಸ್. ಕೆಕಾರ್ಯ ನಿರ್ವಾಣಾಧಿಕಾರಿ ಜ್ಞಾನ, ನೋಡೇಲ್ ಅಧಿಕಾರಿ ಸುಬ್ರಹ್ಮಣ್ಯ, ವರ್ಧಮಾನ್ ಜೈನ್ ಮತ್ತು ಸಂಸ್ಥೆಯ ಪದಾಧಿಕಾರಿಗಳು, ಲಯನ್ಸ್ ಕ್ಲಬ್ ನ ಪದಾಧಿಕಾರಿಗಳುಉಪಸ್ಥಿತರಿದ್ದರು.