ವಿದ್ಯಾವಂತರ ಜಿಲ್ಲೆ, ಬುದ್ದಿವಂತರ ಜಿಲ್ಲೆಯಾಗಿರುವ ಮಂಗಳೂರಿನ ಸುರತ್ಕಲ್ ಭಾಗದಲ್ಲಿ ಕಳೆದ ಭಾನುವಾರ ದಿವಸ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮತ್ತು ಗೂಂಡಾಯಿಸಂ ಮಾಡಿರುವ ಸಂಘಟನೆಯ ಕಾರ್ಯಕರ್ತರ ನಡೆ ಖಂಡನೀಯವಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಹೇಳಿದರು.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅನೈತಿಕ ಪೋಲಿಸ್ ಗಿರಿ ಇವುಗಳಿಗೆ ನೇರವಾಗಿ ರಾಜ್ಯ ಸರ್ಕಾರದ ರಕ್ಷಣೆ ಕಾರಣವಾಗಿದೆ ಎಂದರು.
ಘಟನೆ ನಡೆದು ದಿನಗಳು ಕಳೆದರೂ ಜಿಲ್ಲೆಯ ಶಾಸಕ ಖಾದರ್ ಒಬ್ಬರನ್ನು ಬಿಟ್ಟು ಇನ್ನೂಳಿದ ಏಳು ಶಾಸಕರು ಮೌನ ವಹಿಸಿರುವುದು ಸರಿಯಲ್ಲ, ರಾಜ್ಯ ಸರ್ಕಾರದ ವೈಪಲ್ಯತೆ ರಕ್ಷಣೆಯಿಂದ ಇಂತಹ ಘಟನೆಗಳು ನಡೆಯುತ್ತಿದೆ ಎಂದರು.