ಮಂಗಳೂರು: ಸಮೀಪದ ಗುರುಪುರದ ಚಿಲಿಂಬಿ ಗುಡ್ಡೆ ಎಂಬಲ್ಲಿ ಇಬ್ಬರು ಹಿಂದೂ ಹುಡುಗಿಯರ ಜೊತೆ ಅನ್ಯಕೋಮಿನ ಯುವಕ ಹಾಗೂ ಇನ್ನೊಬ್ಬ ಹಿಂದೂ ಯುವಕ ತಿರುಗಾಡುತ್ತಿರುವುದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು ನಾಲ್ವರನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಅ. 3 ರಂದು ಸಂಜೆ ನಡೆದಿದ್ದು, ಅಲ್ಲಿ ಪತ್ತೆಯಾದ ಇಬ್ಬರು ಯುವತಿಯರ ಪೈಕಿ ಒಬ್ಬಳು ಅಪ್ರಾಪ್ತೆಯಾಗಿದ್ದು ಆಕೆಯ ತಾಯಿ ನೀಡಿದ ದೂರಿನಂತೆ ಇಬ್ಬರು ಯುವಕರ ವಿರುದ್ದ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತರನ್ನು ಬೋಂದೆಲ್ ನಿವಾಸಿ ಧೀರಜ್ ಮತ್ತು ಪಂಜಿಮೊಗರಿನ ಶಾಕೀರ್ ಎನ್ನಲಾಗಿದೆ.
ಇಬ್ಬರ ವಿರುದ್ದ ಬಜ್ಪೆಯಲ್ಲಿ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ. ಜೊತೆಯಲ್ಲಿದ್ದ 16 ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಕರಕೊಂಡು ಬಂದು ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಕ್ಸೋ ಪ್ರಕರಣ ಹಾಗೂ ಅವರಿಬ್ಬರು ಡ್ರಗ್ಸ್ ಸೇವಿಸಿದ ಆರೋಪದ ಮೇರೆಗೆ ಎನ್ ಡಿ ಪಿಎಸ್ ಅಕ್ಟ್ ನಲ್ಲಿ ಪ್ರಕರಣ ದಾಖಲಾಗಿದೆ.