ಪುತ್ತೂರು: ಕೆದಂಬಾಡಿ ಹೆಂಡತಿ ಮನೆಯ ತೋಟದಲ್ಲಿ ಕೃಷಿ ಚಟುವಟಿಕೆ ವೇಳೆ ಆಕಸ್ಮಿಕವಾಗಿ ನಡೆದ ವಿದ್ಯುತ್ ಅವಘಡದಿಂದಾಗಿ ಕರ್ನೂರು ಭಾವ ನಿವಾಸಿ ಕೃಷಿಕ ಧನಂಜಯ ರೈ ರವರು ಮೃತಪಟ್ಟಿದ್ದಾರೆ.
ಕುದ್ಕಾಡಿ ದಿ.ಸೋಮಪ್ಪ ರೈ ಅವರ ಪುತ್ರ ಧನಂಜಯ ರೈ ಅವರು ಕೆದಂಬಾಡಿ ಬೊಳೋಡಿಯಲ್ಲಿರುವ ಪತ್ನಿ ಅಮಿತಾ ಅವರ ಮನೆಯ ತೋಟದಲ್ಲಿ ಕೃಷಿ ಚಟುವಟಿಕೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಅವಘಡವಾಗಿದ್ದು, ಅಸ್ವಸ್ಥಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತ್ತಾದರೂ ಆಗಲೇ ಧನಂಜಯ ರವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಅಮಿತಾ ಪುತ್ರಿಯರಾದ ದೀನಾ ಮತ್ತು ಧ್ಯಾನ ರನ್ನು ಅಗಲಿದ್ದಾರೆ.