ಪುತ್ತೂರು: ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ , ಬೀಡಿ ಬ್ರಾಂಚ್ ಸೇರಿದಂತೆ ಸ್ಥಳೀಯ 4 ಅಂಗಡಿಗಳಿಂದ ಕಳ್ಳತನ ನಡೆದ ಘಟನೆ ಜ.೧೨ ರಂದು ಬೆಳಕಿಗೆ ಬಂದಿದೆ.ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಹಿಂಬದಿಯ ಗೋಪುರದಿಂದ ದೇವಳದ ಒಳಾಂಗಣಕ್ಕೆ ಇಳಿದ ಕಳ್ಳರು ದೇವರ ಗರ್ಭಗುಡಿಯ ಬಾಗಿಲು ಮುರಿದು ಒಳನುಗ್ಗಿ ದೇವರ ಬೆಳ್ಳಿಯ ಮಾಲೆಯನ್ನು ಕಳವು ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಉಳಿದಂತೆ ದೇವಳದ ಕಾಣಿಕೆ ಹುಂಡಿಯನ್ನು ತೆರೆದರೂ ಜ.11 ರಂದು ಕಾಣಿಕೆ ಹುಂಡಿ ಲೆಕ್ಕಚಾರ ಆಗಿರುವ ಹಿನ್ನಲೆಯಲ್ಲಿ ಹುಂಡಿಯಿಂದ ಕಳವು ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ದೇವಳದ ಎದುರಿನ ಅಂಗಡಿಯ ತಿಮ್ಮಪ್ಪ ಗೌಡ ಎಂಬವರ ಅಂಗಡಿಯ ಹಿಂಬದಿಯಿಂದ ಒಳನುಗ್ಗಿದ್ದ ಕಳ್ಳರು ಅಂಗಡಿಯ ಒಳಗೆ ಸ್ವಸಹಾಯ ಸಂಘದ ಸಂಗ್ರಹದ ರೂ.30 ಸಾವಿರ ನಗದು ಮತ್ತು ಇತರ ಚಿಲ್ಲರೆ ಹಣವನ್ನು ದೋಚಿದ್ದುಜಂಕ್ಷನ್ ಅಂಗಡಿಯಲ್ಲೂ ಕಳವಿಗೆ ಯತ್ನಿಸಿದ್ದಾರೆ. ಕೆಮ್ಮಾಯಿ ಜಂಕ್ಷನ್ ಬಳಿಯ ಬರ್ನಾಂಡಿಸ್ ಮತ್ತು ಲಿಂಗಪ್ಪ ಎಂಬವರ ಅಂಗಡಿಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿದ್ದು ಚಿಲ್ಲರೆ ಹಣ ಕಳವಾಗಿದೆ.ಬೀಡಿ ಬ್ರಾಂಚ್ ನಿಂದಲೂ ಕಳವಾಗಿದೆ ಎನ್ನಲಾಗಿದೆ.