ಪುತ್ತೂರು : ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೃತ್ತ ನಿರೀಕ್ಷರಾದ ಗೋಪಾಲ್ ನಾಯ್ಕ್ ರವರು ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರಲ್ ಆಫ್ ರವರ ಆದೇಶದ ಮೇರೆಗೆ ವರ್ಗಾವಣೆಗೊಂಡಿದ್ದಾರೆ.
ಎ.ಸಿ.ಬಿ.ಯಾಗಿ ಕಾರ್ಯನಿರ್ವಹಿಸುತ್ತಿದ್ದ ಸತೀಶ್ ಬಿ.ಎಸ್ ರವರು ಪುತ್ತೂರು ನಗರ ಠಾಣಾ ನೂತನ ವೃತ್ತ ನಿರೀಕ್ಷರಾಗಿ ನಿಯೋಜನೆಗೊಂಡಿದ್ದಾರೆ.ಈ ಮೊದಲು ಸುಳ್ಯದಲ್ಲಿ ಕಾರ್ಯನಿರ್ವಹಿಸಿದ್ದ ಸತೀಶ್ ರವರು ತಮ್ಮ ದಕ್ಷ ಹಾಗೂ ಪ್ರಾಮಾಣಿಕ ಸೇವೆಯ ಮೂಲಕ ಜನರ ಮೆಚ್ಚುಗೆ ಪಾತ್ರರಾಗಿದ್ದರು.
ಮಿತ್ತೂರು ನಿವಾಸಿ ತಿಮ್ಮಪ್ಪ ನಾಯ್ಕ ರವರು ವರ್ಗಾವಣೆಗೊಂಡ ಬಳಿಕ ಗೋಪಾಲ್ ನಾಯ್ಕ್ ರವರು ಪುತ್ತೂರು ನಗರ ಠಾಣೆಗೆ ನಿಯೋಜನೆಗೊಂಡು ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಎ. ಎನ್. ಎಫ್ ಆಗಿ ವರ್ಗಾವಣೆಗೊಂಡಿದ್ದಾರೆ.