ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಸಂಸ್ಥೆಯು ಸಿ.ಪಿ.ಸಿ.ಆರ್.ಐ ಬಳಿ ಇರುವ ಮಂಗಳ ಮಂಟಪದ ಕಟ್ಟಡದಲ್ಲಿ ಜಿಲ್ಲೆಯ ಕೇಂದ್ರ ಕಛೇರಿಯನ್ನು ಈಗಾಗಲೇ ತೆರೆದಿದ್ದು, (C.F.P.C) ಇದರ ಮಹಾಸಭೆಯು ಮಂಗಳ ಮಂಟಪದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ರೈತರ ಅತೀ ಮುಖ್ಯವಾದ ಬೆಳೆ ತೆಂಗು ಬೆಳೆ ಇದನ್ನು ಕಲ್ಪವೃಕ್ಷ ಎಂದು ಭಾರತ ದೇಶದಲ್ಲಿ ಕರೆಯುತ್ತಾರೆ. ಆದರೆ ಕಲ್ಪವೃಕ್ಷದ ಉತ್ಪನ್ನಗಳಿಂದ ಔಷಧಿ ಮತ್ತು ತೆಂಗಿನಕಾಯಿಗಳಿಗೆ ನಮ್ಮ ದೇಶದಲ್ಲಿ ಬಾರಿ ಬೇಡಿಕೆ ಇದ್ದು ಹೊರದೇಶದಲ್ಲಿ ಹೆಚ್ಚಿನ ಬೇಡಿಕೆ ಕೂಡಾ ಇರುತ್ತದೆ. ಆದರೆ ನಮ್ಮ ದೇಶದಲ್ಲಿ ಮದ್ಯವರ್ತಿ ಗಳ ಹಾವಳಿ ಗಳಿಂದ ತೆಂಗು ಬೆಳೆಯುವ ರೈತರು ತುಂಬಾ ನಷ್ಟವನ್ನು ಅನುಭವಿಸುತ್ತಿದ್ದಾರೆ.
ಅದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರಕಾರದ ಬಹುದೊಡ್ಡ ಯೋಜನೆ (C.F.P.C) ತೆಂಗು ರೈತರ ಉತ್ಪಾದನ ಸಂಸ್ಥೆ ಯನ್ನು ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತ ಸರಕಾರದ ಪರವಾನಿಗೆ ಪಡೆದು ಜಿಲ್ಲೆಯ ಎಂಟು ತಾಲೂಕುಗಳಲ್ಲಿ ತೆಂಗು ಬೆಳೆಯುವ ರೈತರನ್ನು ಈ ಸಂಸ್ಥೆಯ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಗಳ ಮೂಲಕ ಷೇರುದಾರರನ್ನಾಗಿ ನೋಂದಣಿ ಮಾಡುತ್ತಿದೆ. ರೈತರಿಗೆ ಹಾಗೂ ಕಲ್ಪವೃಕ್ಷಕ್ಕೆ ವಿವಿಧ ಸವಲತ್ತುಗಳನ್ನು ಸರಕಾರದ ಮೂಲಕ ನೀಡುವಂತ ಸಂಸ್ಥೆಯಾಗಿದೆ.
ಪದಾಧಿಕಾರಿಗಳ ಆಯ್ಕೆ:
ರೈತರ ಮತ್ತು ನಿರ್ದೇಶಕರುಗಳ ಸಮ್ಮುಖದಲ್ಲಿ ಅಧ್ಯಕ್ಷರಾಗಿ ಯಂ.ಪ್ರಸಾದ್ ಶೆಟ್ಟಿ ರವರನ್ನು ಮತ್ತು ಉಪಾಧ್ಯಕ್ಷರಾಗಿ ಕುಸುಮಾಧರ. ಯಸ್. ಕೆ.ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ಮತ್ತು ಉಪಾಧ್ಯಕ್ಷರುಗಳ ಹೆಸರನ್ನು ನಿರ್ದೇಶಕರಾದ ವರ್ಧಮನ್ ಜೈನ್ ಮತ್ತು ಲಕ್ಷ್ಮಣ್ ನಾಯ್ಕ ಇವರುಗಳು ಸೂಚಿಸಿ ನಿರ್ದೇಶಕರುಗಳಾದ ತಿಮ್ಮಪ್ಪ ಬಿ. ಕೆ ಹಾಗೂ ಅನುರಾಧ ರವರು ಅನುಮೋದಿಸಿದರು. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆ ಕೆ. ಎಂ. ಸಿ ಇದರ ನೋಡೆಲ್ ಅಧಿಕಾರಿ ಗಳಾದ ರಾಕೇಶ್ ಮಂಗಳೂರು ಮತ್ತು ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಯನ್. ಜಿ. ಓ ಗಳಾದ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆ ಇದರ ನೇತೃತ್ವದಲ್ಲಿ ಮಹಾಸಭೆ ನಡೆಯಿತು. ಸಂಸ್ಥೆಯ ಕಾರ್ಯ ನಿರ್ವಾಣಧಿಕಾರಿ ಜ್ಞಾನ ಮತ್ತು ನೋಡೆಲ್ ಅಧಿಕಾರಿ ಸುಬ್ರಮಣ್ಯ ರವರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಜಿಲ್ಲೆಯ ಎಲ್ಲಾ ತಾಲೂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.