ಕೊಡಗು: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅ್ಯಂಗೇರಿ ಗ್ರಾಮದಲ್ಲಿ ನಡೆದಿದೆ.
ನೇಣು ಬಿಗಿದುಕೊಂಡು ಅಮೀರ(20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮೀರ ಪೋಷಕರಿಂದ ವರದಕ್ಷಿಣೆ ಕಿರುಕುಳದ ಆರೋಪ ಕೇಳಿ ಬಂದಿದೆ.
11 ತಿಂಗಳ ಹಿಂದೆ ರುವೈಸ್ ಎಂಬಾತನನ್ನು ಅಮೀರ ವಿವಾಹವಾಗಿದ್ದರು. ಸಾವಿಗೆ ಕೆಲವೇ ನಿಮಿಷಗಳ ಮೊದಲು ವಾಟ್ಯಾಪ್ ವಾಯ್ಸ್ ಮೆಸೇಜ್ ಮೂಲಕ ಅಮೀರಾ ಪತಿ ತಲಾಖ್ ನೀಡಿದ್ದಾನೆ. ಎರಡು ಬಾರಿ ಪತಿ ರುಬೈಸ್ ತಲಾಖ್ ಹೇಳಿದ್ದಾನೆ. ವಾಟ್ಯಾಪ್ ವಾಯ್ಸ್ನಲ್ಲಿ ತಲಾಖ್ ಬಂದ ಬೆನ್ನಿಗೇ ಅಮೀರ ನೇಣು ಹಾಕಿಕೊಂಡಿದ್ದಾರೆ. ಈಗ ಭಾರತದಲ್ಲಿ ತ್ರಿವಳಿ ತಲಾಖ್ ಸಿಂಧು ಅಲ್ಲ. ಆದರೂ ಗಂಡನ ತಲಾಖ್ ಎಂಬ ವಾಯ್ಸ್ ನೋಟ್ನಿಂದ ನೊಂದ ಅಮೀರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.