ಹಿಂದೂ ಧರ್ಮದ ಮಾನಬಿಂದುಗಳ ರಕ್ಷಣೆ,ಹಲವಾರು ಸಮಾಜಮುಖಿ ಸೇವಾ ಕಾರ್ಯ,ಹಿಂದೂ ಯುವಕರಲ್ಲಿ ಸಂಸ್ಕಾರ ಬೆಳೆಸಿ ಧರ್ಮ ಹಾಗೂ ರಾಷ್ಟ್ರೀಯತೆಯ ಚಿಂತನೆಯನ್ನು ಯುವ ತರುಣರಲ್ಲಿ ಹಲವು ವರುಷಗಳಿಂದ ಬೆಳೆಸುತ್ತಿರುವ ಸಂಘಟನೆ ವಿಶ್ವ ಹಿಂದೂ ಪರಿಷತದ್ ಬಜರಂಗದಳ ಇದರ ಪುತ್ತೂರು ಪ್ರಖಂಡದ ಬಲಿಷ್ಠ ಘಟಕವಾದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಿಂದವಿ ಶಾಖೆ ಬಲ್ನಾಡು ಇದರ ವತಿಯಿಂದ ಇಂದು ಬಲ್ನಾಡ್ ನಲ್ಲಿ ನೂತನ ಮಾರ್ಗಸೂಚಿ ಧ್ವಜಕಟ್ಟೆಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ ಇವರು ತೆಂಗಿನಕಾಯಿ ಒಡೆಯುವ ಮೂಲಕ ನೂತನ ಮಾರ್ಗಸೂಚಿ ಧ್ವಜಕಟ್ಟೆಯನ್ನು ಉದ್ಘಾಟನೆ ಮಾಡಿದರು.
ನಂತರ ನಡೆದ ಶಸ್ತ್ರಪೂಜೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷರಾದ ಜನಾರ್ಧನ ಬೆಟ್ಟ,ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಮಾಧವ ಗೌಡ ಕಾಂತಿಲ,ವಿಶ್ವ ಹಿಂದೂ ಪರಿಷತ್ ಹಿಂದವಿ ಶಾಖೆ ಅಧ್ಯಕ್ಷರಾದ ಗಿರೀಶ್ ಪದವು,ವಿನಾಯಕ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಶರತ್ ಮುದಲಾಜೆ,ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಪರಮೇಶ್ವರಿ ಬಬ್ಬಿಲಿ,ನಗರ ಸಭಾ ಸದಸ್ಯರಾದ ಶ್ರೀಮತಿ ಪೂರ್ಣಿಮಾ ಉಪಸ್ಥಿತರಿದ್ದರು,