ಪುತ್ತೂರು: ಲಾರಿ ಮತ್ತು ಬೈಕ್ ನಡುವೆ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅ.10 ರಂದು ಪುತ್ತೂರಿನ ಬಲ್ನಾಡ್ ನಲ್ಲಿ ನಡೆದಿದ್ದು, ಘಟನೆಯ ಕುರಿತು ಅಬ್ದುಲ್ ಖಾದರ್ ಎಂಬವರು ಲಾರಿ ಚಾಲಕ ಸುಧಾಕರ ಶೆಟ್ಟಿ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಪುತ್ತೂರು ಉಜ್ರುಪಾದೆ ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಉಜ್ರುಪಾದೆ ಕಡೆಗೆ ಲಾರಿಯೊಂದನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಉಜ್ರುಪಾದೆ ಕಡೆಯಿಂದ ಪುತ್ತೂರು ಕಡೆಗೆ ಬಲ್ನಾಡು ಪಳ್ಳಿಕೆರೆಯ ಅಬ್ದುಲ್ ಅಝೀಝ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ.
ಈ ಅಪಘಾತದಿಂದಾಗಿ ಬೈಕ್ ಮಗುಚಿಬಿದ್ದು , ಅದರ ಸವಾರನಾದ ಅಬ್ದುಲ್ ಅಝೀಝ್ ಎಂಬವನು ರಸ್ತೆಗೆ ಎಸೆಯಲ್ಪಟ್ಟು , ಸದ್ರಿ ಲಾರಿಯು ಆತನ ಮೇಲೆಯೇ ಚಲಿಸಿದ್ದು , ಈ ಅಪಘಾತದಿಂದಾಗಿ ಬೈಕ್ ಸವಾರನ ತಲೆಯು ಹುಡಿಯಾಗಿದ್ದು, ಗಂಭೀರ ಗಾಯಗೊಂಡ ಅಝೀಝ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ಘಟನೆಗೆ ಚಾಲಕನ ನಿರ್ಲಕ್ಷತನವೇ ಕಾರಣವಾಗಿದ್ದು, ಲಾರಿ ಚಾಲಕ ಸುಧಾಕರ ಶೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ: 84/2021 ಕಲಂ:279,304(A) IPC, ಯಂತೆ ಪ್ರಕರಣ ದಾಖಲಾಗಿದೆ.