ಪುತ್ತೂರು: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಹಾಗೂ ಈ ವಿಷಯವಾಗಿ ಯಾರೋ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ಬೈದು ಕಾರು ಚಾಲಕ ಹಿಂದೂ ಸಂಘಟನೆಯ ಕಾರ್ಯಕರ್ತ ಬೆಳ್ತಂಗಡಿಯ ಸೃಜನ್ ರವರಿಗೆ ಹಲ್ಲೆ ನಡೆಸಿದ ಘಟನೆ ಅ.10 ರಂದು ಸಾಲ್ಮರ ಎಸ್.ಎಂ ಸರ್ಕಲ್ ಬಳಿ ನಡೆದಿದೆ.

ಬೈಕ್ ಸವಾರನನ್ನು ಪರ್ಪುಂಜ ಕುಂಟಿನೊಪಿನಡ್ಕ ನಿವಾಸಿ ಮುಕ್ಷೀದ್ ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಮುಕ್ಷೀದ್ ಜೊತೆ ಆತನ ತಾಯಿ ಖೈರುನ್ನೀಸಾ ಕೂಡ ಪ್ರಯಾಣಿಸುತ್ತಿದ್ದು, ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ದುಷ್ಕ ರ್ಮಿಗಳಿಂದ ಹಲ್ಲೆಗೊಳಗಾದ ಸೃಜನ್ ರವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆ ನಡೆಸಿದವರು ಯಾರು ಎಂದು ಇನ್ನಷ್ಟೇ ತಿಳಿಯಬೇಕಿದೆ.
