ಬಂಟ್ವಾಳ: ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯ ಇದರ ಬಿಲ್ಲವ ಗ್ರಾಮ ಸಮಿತಿ ಅಮ್ಟೂರು ಆಶ್ರಯದಲ್ಲಿ ಕಟ್ಟೆಮಾರು ಮಂತ್ರದೇವತೆ ಸಾನಿಧ್ಯದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ರುಕ್ಮಯ್ಯ ಪೂಜಾರಿ ಅಧ್ಯಕ್ಷತೆ ವಹಿಸಿ ಛಲ ಮತ್ತು ಸಾಧನೆ ಇದ್ದರೆ ಉತ್ತಮ ನಾಯಕನಾಗಿ ಹೊರ ಹೊಮ್ಮಲು ಸಾಧ್ಯ ಎಂದು ಸಾಧನೆಯ ಸಾಧಕರನ್ನು ಅಭಿನಂದಿಸಿ ಮಾತನಾಡಿದರು.
ಬಿರ್ವೆರ್ ಕಡೇಶಿವಾಲಯ ಇದರ ಮಾಜಿ ಅಧ್ಯಕ್ಷರಾದ ವಿದ್ಯಾಧರ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚೆನ್ನಪ್ಪ ಆರ್ ಕೋಟ್ಯಾನ್, ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯ ಇದರ ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ, ರಾಯಿ ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ ರಾಯಿ ಉಪಸ್ಥಿತರಿದ್ದರು.
ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಶ್ರೀಮತಿ ಸುಚೇತ ಪೂಜಾರಿ, ಕಥೆ-ಕಾದಂಬರಿ ಬರಹಗಾರ ಧೀರಜ್ ಪೋಯ್ಯೆಕಂಡ, ಅಂತರಾಷ್ಟ್ರೀಯ ಮಟ್ಟದ ಜೂಡೋ ಸ್ಪರ್ಧೆಯಲ್ಲಿ ಬಂಗಾರದ ಪದಕ ವಿಜೇತ ನಿಷಿತ್ ಪೂಜಾರಿ, ಚಲನಚಿತ್ರ ನಟಿ ದುನಿಯಾ ರಶ್ಮಿ, ಕಟ್ಟೆಮಾರು ಕ್ಷೇತ್ರದ ಮುಖ್ಯಸ್ಥರಾದ ಮನೋಜ್ ರವರನ್ನು ಅಭಿನಂದಿಸಲಾಯಿತು.
ಬಿಲ್ಲವ ಸಮಾಜ ಸೇವಾ ಸಂಘ ಅಮ್ಟೂರು ಗ್ರಾಮ ಸಮಿತಿ ಅಧ್ಯಕ್ಷರಾದ ಮನೋಜ್ ಕಟ್ಟೆಮಾರ್ ಸ್ವಾಗತಿಸಿದರು, ವಸಂತ ಬಟ್ಟಿಹಿತ್ಲು ಧನ್ಯವಾದ ಸಲ್ಲಿಸಿದರು. ಸಂತೋಷ್ ಕುಮಾರ್ ಬೋಲ್ಪೋಡಿ ಕಾರ್ಯಕ್ರಮ ನಿರ್ವಹಿಸಿದರು.