ಉಪ್ಪಿನಂಗಡಿ: ಹಳೆಗೇಟು ಬಳಿಯ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿ ಸತ್ತ ಎರಡು ಬೃಹತ್ ಕೋಣಗಳನ್ನು ಎಸೆದು ಹೋದ ಘಟನೆ ಅ.17ರಂದು ನಡೆದಿದೆ.
ಸುಮಾರು 100 k.g ತೂಕದ ಕೋಣಗಳಾಗಿದ್ದು, ರಸ್ತೆ ಬದಿಯ ಕುರುಚಲು ಪೊದೆಗೆ ಎಸೆಯಲಾಗಿದೆ. ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುವಾಗ ಜಾನುವಾರು ಸಾವನ್ನಪ್ಪಿದ್ದು ಆದುದರಿಂದ ಕೋಣಗಳನ್ನು ಇಲ್ಲಿ ಎಸೆಯಲಾಗಿರಬಹುದೆಂದು ಶಂಕಿಸಲಾಗಿದೆ.
ವಿಷಯ ತಿಳಿದು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಬಳಿಕ ಇವುಗಳನ್ನು ಸ್ಥಳದಿಂದ ವಿಲೇವಾರಿ ಗೊಳಿಸಲಾಯಿತು ಎಂದು ತಿಳಿದು ಬಂದಿದೆ.
ಗೋ ಹತ್ಯೆ, ಅಕ್ರಮ ಸಾಗಾಟ ನಿಷೇಧವಿದ್ದರೂ, ಕಠಿಣ ಕಾನೂನು ಜಾರಿಯಲ್ಲಿದ್ದರೂ, ಅಕ್ರಮ ಗೋ ಸಾಗಾಟ ನಿಂತಿಲ್ಲ, ವಾಹನದಲ್ಲಿ ತುಂಬಿಸಿ ಅಕ್ರಮವಾಗಿ ಗೋ ಸಾಗಾಟ ನಡೆಸುವುದರಿಂದ ಈ ಕೃತ್ಯವಾಗಿದೆ. ಈ ಕೃತ್ಯ ವೆಸಗಿದ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ಗೋ ಸಾಗಾಟ ಕ್ಕೆ ಕಡಿವಾಣ ಹಾಕಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ.