ಮುಂಡೂರು : ಮುಂಡೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದ್ಯಮಿ ನೇಸರ ರವಿ ಶೆಟ್ಟಿ ಮೂಡಂಬೈಲು ಅವರ ಮನೆಯಲ್ಲಿ ಜ. 17ರಂದು ಅದ್ದೂರಿ ಅಭಿನಂದನಾ ಸಮಾರಂಭವು ನಡೆಯಿತು.
ಚೆಂಡೆ ವಾದನದ ಮೂಲಕ ಗಣ್ಯರೆಲ್ಲರನ್ನು ಕಾರ್ಯಕ್ರಮಕ್ಕೆ ಆದರಪೂರ್ವಕವಾಗಿ ಸ್ವಾಗತಿಸಲಾಯಿತು.. ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಂಡೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರಪ್ರಥಮವಾಗಿ ಅಧಿಕಾರಕ್ಕೇರಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ರೋಚಕ ಗೆಲುವನ್ನು ಸಾಧಿಸಿದ ಅಭ್ಯರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಸಾಜಾ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ರಾಜಕೀಯ ವೃತ್ತಿಯಲ್ಲ ಅದು ವೃತವಾಗಬೇಕು, ಪ್ರತಿಯೊಬ್ಬ ಅಭ್ಯರ್ಥಿಯ ಮೂಲಮಂತ್ರ ಇದಾಗಬೇಕು, ಶ್ರದ್ಧೆಯಿಂದ ಆಡಳಿತ ನಡೆಸಬೇಕು, ಗ್ರಾ. ಪಂ. ಆಡಳಿತಕ್ಕೆ ಬರುವ ಅಭ್ಯರ್ಥಿಗಳು ಜನಸೇವಕನಾಗಿ ಶ್ರಮಿಸಬೇಕು, ಗ್ರಾಮ ಪಂಚಾಯಿತಿ ಜನರ ಬೇಡಿಕೆಯ ಪರಿಪೂರ್ಣತೆಗಾಗಿ ಸೃಷ್ಟಿಯಾಗಿರುವ ವ್ಯವಸ್ಥೆ ಎನ್ನುವುದನ್ನು ಯೋಚಿಸಬೇಕಾಗಿದೆ, ಗ್ರಾಮಕ್ಕೆ ಬೇಕಾದ ಸರ್ವ ಸವಲತ್ತುಗಳನ್ನು ವಿತರಿಸುವ ಯೋಜನೆಗಳಾಗಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾರ್ಯಕ್ರಮದಲ್ಲಿ ಚುನಾವಣಾ ಪ್ರಭಾರಿ ರಾಜೇಶ್ ಬನ್ನೂರು ಅವರು ಚುನಾವಣಾ ಸಂದರ್ಭದಲ್ಲಿ ನಡೆಸಿದ ಅವಿರತ ಸೇವೆಯನ್ನು ಗುರುತಿಸಿ ಗೌರವಾರ್ಪಣೆ ಸಲ್ಲಿಸಲಾಯಿತು. ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಾದ ಲಿಂಗಪ್ಪ ಪೂಜಾರಿ, ಮೀನಾಕ್ಷಿ ಕುಶಾಲಪ್ಪ ಗೌಡ, ಗೀತಾ ಮೋಹನ್, ಅಶೋಕ್ ಕುಮಾರ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಅರುಣಾ ಅನಿಲ್ ಕುಮಾರ್, ಪುಷ್ಪಾವತಿ ಪುರಂದರ ಗೌಡ, ಉಮೇಶ್ ಗೌಡ ಅಂಬಟ, ಕಾವ್ಯ ಚೆನ್ನಪ್ಪ ಗೌಡ ತೌಡಿಂಜ, ದುಗ್ಗಪ್ಪ ಕಡ್ಯ, ಯಶೋಧ ಅಜರಾಡಿ, ಗೌತಮ್ ರೈ ಸರ್ವೆ, ಚಂದ್ರಶೇಖರ ಎನ್ಎಸ್ ಡಿ, ಪ್ರೇಮಾ ಬಾವಿಕಟ್ಟೆ, ಪ್ರವೀಣ್ ನಾಯ್ಕ, ವಸುಧಾ ರೈ, ಅಶೋಕ್ ರೈ ಸೊರಕೆ, ಸಂಧ್ಯಾ ರವೀಂದ್ರ, ಕರುಣಾಕರ ಇಲ್ಯ, ಸುನೀತಾ ಅವರಿಗೆ ಶಾಲು ಹೊದಿಸಿ ಗೌರವದ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಜಿ. ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ. ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪಾಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಂ ಪೂಜಾರಿ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್ ಸಿ ನಾರಾಯಣ್, ತಾ. ಪಂ ಸದಸ್ಯ ಶಿವರಂಜನ್, ಬಿಜೆಪಿ ಪುತ್ತೂರು ಮಂಡಲ ಪ್ರಧಾನ ಕಾರ್ಯದರ್ಶಿ ನಿತೇಶ್ ಕುಮಾರ್ ಶಾಂತಿವನ, ಎಪಿಎಂಸಿ ನಿರ್ದೇಶಕಿ ತ್ರಿವೇಣಿ ಪೆರುವೋಡಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಮಾಜಿ ತಾ. ಪಂ. ಸದಸ್ಯ ಮೋಹನ್ ರೈ ನರಿಮೊಗರು, ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಕಾಂತ ಆಚಾರ್ಯ ಹಿಂದಾರು, ಉದ್ಯಮಿ ಉದಯ ಎಚ್, ಉದ್ಯಮಿ ಜಯಂತ್ ನಡುಬೈಲು, ಅಶೋಕ್ ಕುಮಾರ್ ಉರಿಮಜಲು, ಮುರಳೀಧರ ಭಟ್ ಬಂಗಾರಡ್ಕ, ಮಾಜಿ ಸೈನಿಕರಾದ ಸುಂದರ ನಡುಬೈಲು, ಕೃಷ್ಣ ಕುಮಾರ್ ಅತ್ರಿಜಾಲು ಸೇರಿ ಹಲವರು ಉಪಸ್ಥಿತರಿದ್ದರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ರಮೇಶ್ ಗೌಡ ಪಜಿಮಣ್ಣು ವಂದಿಸಿ, ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.