ಮುಂಡೂರು : ಮುಂಡೂರು ಗ್ರಾಮ ಪಂಚಾಯತ್ ಚುನಾವಣಾ ಕಣದಲ್ಲಿ ಗೆಲುವಿನ ಹೆಜ್ಜೆಯಿಟ್ಟ ಅಭ್ಯರ್ಥಿಗಳಿಗೆ ಅದ್ದೂರಿ ಅಭಿನಂದನಾ ಸಮಾರಂಭವು ಜ. 17ರಂದು ಸಾಯಂಕಾಲ ಮುಂಡೂರಿನ ಮೂಡಂಬೈಲು ರವಿ ಶೆಟ್ಟಿಯವರ ನೇಸರ ಕಂಪ ಮನೆಯಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಕರಾವಳಿಯ ಹೆಮ್ಮೆಯ ಸಚಿವರಾದ ಕೋಟ ಶ್ರೀನವಾಸ ಪೂಜಾರಿ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಚುನಾವಣಾ ಉಸ್ತುವಾರಿ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭಾ ಅಧ್ಯಕ್ಷ ಜೀವಂದರ್ ಜೈನ್ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ತಾಲೂಕು ಪಂಚಾಯತ್ ಸದಸ್ಯ ಶಿವರಂಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.