ಉಪ್ಪಿನಂಗಡಿ: ನೇತ್ರಾವತಿ ನದಿಗೆ ಹಾರಿ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಮುತ್ತಪ್ಪ ಶೆಟ್ಟಿ(70ವ) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.18 ರಂದು ನಡೆದಿದೆ.
ಮುತ್ತಪ್ಪ ರವರನ್ನು ರಕ್ಷಿಸಲು ಸ್ಥಳೀಯ ಯುವಕರು ಪ್ರಯತ್ನ ಪಟ್ಟರೂ ಆ ವೇಳೆಗೆ ಮುತ್ತಪ್ಪರವರು ಮೃತಪಟ್ಟಿದ್ದರೆಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಲಾಗಿದೆ.