ಪುತ್ತೂರು: ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಗಾಂಧಿ ಗ್ರಾಮ ಸ್ವರಾಜ್ಯ’ ಕಾರ್ಯಕ್ರಮ ಗ್ರಾಮ ಗ್ರಾಮಗಳಲ್ಲಿ ನಡೆಯುತ್ತಿದೆ.
ಮಹಾತ್ಮ ಗಾಂಧೀಜಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಅದಮ್ಯ ಚೈತನ್ಯ.. ಇವರ ಅನೇಕ ಹೋರಾಟಗಳ ಫಲವಾಗಿ ದೇಶ ಇಂದು ಆಂಗ್ಲೀಯರ ಕಬಂಧಬಾಹುವಿನಿಂದ ಮುಕ್ತಿಯನ್ನು ಹೊಂದಿದೆ. ಆದರೆ ಇಂತಹ ಸೂಕ್ಷ್ಮಾಣುಸೂಕ್ಷ್ಮ ವಿಚಾರಗಳನ್ನು ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ತಿಳಿಹೇಳಿ, ದೇಶಾಭಿಮಾನ ಮೂಡಿಸುವುದು ಅವಶ್ಯವಾಗಿರುವಂಥದ್ದು ಎಂಬ ಆಶಯದೊಂದಿಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಚರಿಸುತ್ತಿದೆ.
ಹಲವು ಗ್ರಾಮಗಳಿಗೆ ಭೇಟಿ ನೀಡಿ ಗಾಂಧೀಜಿ ತತ್ವಾದರ್ಶಗಳು, ದೇಶದ ಒಳಿತಿಗಾಗಿ, ಗ್ರಾಮೀಣ ಪ್ರದೇಶದ ಒಳಿತಿಗಾಗಿ ಕಾಂಗ್ರೆಸ್ ಪಕ್ಷ ಮಾಡಿರುವ ನೂರಾರು ಕಾರ್ಯಗಳ ಕುರಿತಾದ ಮಾಹಿತಿಯನ್ನು ನೀಡುವುದು ಇದರ ಉದ್ದೇಶವಾಗಿದೆ.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ ಅವರ ಮಹತ್ವಪೂರ್ಣ ಚಿಂತನೆ ಹಾಗೂ ಕ್ರಿಯಾಶೀಲತೆಯ ಪರಿಣಾಮವಾಗಿ ರೂಪುಗೊಂಡು ಇವರ ತಂಡದವರು ಜತೆಯಾಗಿ ಈ ಯೋಜನೆ ಹಲವು ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುವಂತೆ ಮಾಡುತ್ತಿದೆ. ಗ್ರಾಮಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವವನ್ನು ಸಾರುವುದು ಹಾಗೂ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದೇ ಈ ಯೋಜನೆಯ ಉದ್ದೇಶವೂ ಆಗಿರುತ್ತದೆ.
ಕುಂಬ್ರದಲ್ಲಿ ಉದ್ಘಾಟನೆಗೊಂಡು ಕೆದಂಬಾಡಿ, ಕೊಳ್ತಿಗೆ, ಮುಂಡೂರು, ನಿಡ್ಪಳ್ಳಿ, ಪಾಣಾಜೆ, ಕುರಿಯ, ಈಶ್ವರಮಂಗಲ, ಕೆಯ್ಯೂರಿನಲ್ಲಿ ಕಾರ್ಯಕ್ರಮ ಪೂರೈಸಿದ್ದು, ಮುಂದೆಯೂ ಹಲವು ಗ್ರಾಮಗಳಿಗೆ ತಂಡವು ಭೇಟಿ ನೀಡಲಿದೆ. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಹಲವು ಗಣ್ಯರ ದಿಕ್ಸೂಚಿ ಭಾಷಣದ ಮುಖೇನ, ಸಾಕ್ಷ್ಯ ಚಿತ್ರಗಳ ಮೂಲಕವೂ ಗ್ರಾಮೀಣ ಜನರನ್ನು ಪ್ರೇರೇಪಿಸುವ ಕಾರ್ಯ ನಡೆಯುತ್ತಿದೆ.
ಕುರಿಯದಲ್ಲಿ ನಡೆದ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ:
ಮುಂಡೂರಿನಲ್ಲಿ ನಡೆದ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ:
ಪಾಣಾಜೆಯಲ್ಲಿ ನಡೆದ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ:
ನಿಡ್ಪಳ್ಳಿಯಲ್ಲಿ ನಡೆದ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ:
ಕುಂಬ್ರದಲ್ಲಿ ನಡೆದ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ:
ಕೆಯ್ಯೂರಿನಲ್ಲಿ ನಡೆದ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ:
ಈಶ್ವರಮಂಗಲದಲ್ಲಿ ನಡೆದ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ:
ಕೆದಂಬಾಡಿಯಲ್ಲಿ ನಡೆದ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ: