ಪುತ್ತೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಜತೆಯಾಗಿ ನಮ್ಮ ಟಿವಿ ನಡೆಸುವ ಯೆಯಾ ಹಾಸಯಾ ಎನ್ನುವ ಕೊಂಕಣಿ ಶೋ ಒಂದರಲ್ಲಿ ಪುತ್ತೂರಿನ ತಂಡವಾದ “ಟೀಮ್ ಪೆದ್ರು ವೈನ್ಸ್” ಫೈನಲ್ ತಲುಪಿದೆ.
ಮಂಗಳೂರಿನ ಖಾಸಗಿ ವಾಹಿನಿ ನಮ್ಮ ಟಿವಿಯಲ್ಲಿ ಈ ತಂಡ ಭಾಗವಹಿಸಿದ್ದು, ಫೈನಲ್ ಹಂತಕ್ಕೆ ತಲುಪಿ ಅ.30 ರಂದು ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ.
ಸೋನಲ್, ಮೆಗಸ್, ಅವಿಲ್, ನಿತಿನ್, ಅವಿನ್, ಜೆಸ್ಟನ್, ಡಾಫ್ನಿ, ಗ್ಲೆನ್ಸನ್ ತಂಡದ ಪ್ರತಿಭಾನ್ವಿತ ಕಲಾವಿದರಾಗಿದ್ದು, ಫೈನಲ್ ಹಂತಕ್ಕೆ ತಲುಪಿದ್ದಾರೆ. ಈ ಮೂಲಕ ಪುತ್ತೂರಿನ ಹಿರಿಮೆಗೆ ಮತ್ತೊಂದು ಗರಿ ಸೇರಿದಂತಾಗಿದೆ.