ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, SNDPS ಪ್ರಶಸ್ತಿ ಪುರಸ್ಕೃತ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನದ ‘ಹೃದಯವಂತರು’ ಬಿರುದು ಪಡೆದ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಗಳ ತತ್ವ, ಆದರ್ಶಗಳ ಪ್ರಕಾರ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದೊಂದಿಗೆ, ಉದ್ದೇಶದೊಂದಿಗೆ ನಿರಂತರ ಸಮಾಜಸೇವೆಯಲ್ಲಿ ಕ್ರಾಂತಿ ಮಾಡುತ್ತಿರುವ ಬಿರುವೆರ್ ಕುಡ್ಲ(ರಿ) ವತಿಯಿಂದ ಮಹಾಸೇವಾ ಯೋಜನೆಯ ನೂತನ ಸುಸಜ್ಜಿತ ಮನೆಯ ಹಸ್ತಾಂತರ ಕಾರ್ಯಕ್ರಮವು ಅ.20 ರಂದು ನಡೆಯಲಿದೆ.
ಬಂಟ್ವಾಳ ಸಮೀಪದ ಭಂಡಾರಿ ಬೆಟ್ಟು ಪ್ರದೇಶದಲ್ಲಿ ವಾಸವಾಗಿರುವ ಕಡುಬಡವರಾದ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಲಿಂಗಪ್ಪ ಹಾಗೂ ಮೋಹಿನಿ ದಂಪತಿಗಳಿಗೆ ಸಂಘಟನೆಯ ಆಯೋಜಿಸಿದ ಮಹಾ ಸೇವಾ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ನೂತನ ಸುಸಜ್ಜಿತ ಮನೆಯ ಹಸ್ತಾಂತರ ಕಾರ್ಯಕ್ರಮ ಗಣ್ಯರ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಹಸ್ತಾಂತರ ಕಾರ್ಯನಡೆಯಲಿದೆ.
ನೂತನ ಸುಸಜ್ಜಿತ ಮನೆಯ ಹಸ್ತಾಂತರ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.