ಪುತ್ತೂರು: ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ(ರಿ) ವತಿಯಿಂದ 4ನೇ ವರ್ಷದ “ಕೆಸರುಡೊಂಜಿ ದಿನ” ಕಾರ್ಯಕ್ರಮವು ನ.7 ರಂದು ಮಜ್ಜಾರು ಗದ್ದೆಯಲ್ಲಿ ನಡೆಯಲಿದೆ.
ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ತುಳುಚಲನಚಿತ್ರ ನಟ, ರಂಗ ಭೂಮಿ ಕಲಾವಿದ, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ಕಾಮಿಡಿ ಕಿಲಾಡಿಗಳು ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಸೂರಜ್, ಎಮ್.ಆರ್. ಗ್ರೂಪ್ ನ ಮನ್ಮಿತ್ ರೈ ಹಾಗೂ ಝೀ ಕನ್ನಡದ ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ರಾಕೇಶ್ ಪೂಜಾರಿ ಆಗಮಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ದೀಪ ಪ್ರಜ್ವಲನೆಯನ್ನು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಗೌರವಾಧ್ಯಕ್ಷರಾದ ಮೋಹನ್ ರೈ ಓಲೆಮುಂಡೋವು ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷ ರವಿ ಮಚ್ಚಾರು ವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಅರಿಯಡ್ಕ ಗ್ರಾಮ ಪಂಚಾಯತ್ ನ ಸೌಮ್ಯ ಬಾಲಸುಬ್ರಹ್ಮಣ್ಯ, ಅರಿಯಡ್ಕ ಅರಣ್ಯ ಗ್ರಾಮ ಸಮಿತಿ ಅಧ್ಯಕ್ಷರಾದ ಲೋಕೇಶ್ ರೈ ಅಮೈ, ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಮಕೃಷ್ಣ ಪಡುಮಲೆ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ದಿನೇಶ್ ಸಾಲ್ಯಾನ್ ಬನ್ನೂರು, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಮಣಿಯಾಣಿ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಉಷಾ ರೇಖಾ ರೈ, ನೆಹರು ಯುವ ಕೇಂದ್ರ ಮಂಗಳೂರು ಇದರ ಸಂಯೋಜಕಿ ಪ್ರಜ್ಞಾ ಕುಲಾಲ್ ಕಾವು, ಸಮಾಜ ಸೇವಕರಾದ ಕೆ. ಮಂಜುನಾಥ್ ಬಾಬು, ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ.’ಮಯೂರ’ ಗೋಳ್ತಿಲ ಆಗಮಿಸಲಿದ್ದಾರೆ.
ಸಮಾರೋಪ ಸಮಾರಂಭದ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷ ರವಿ ಮಜ್ಜಾರು ವಹಿಸಲಿದ್ದಾರೆ. ಗೌರವ ಉಪಸ್ಥಿತಿಯನ್ನು ಉದ್ಯಮಿ ಮನ್ಮಿತ್ ರೈ, ತುಳುಚಲನಚಿತ್ರ ನಟ, ರಂಗ ಭೂಮಿ ಕಲಾವಿದ ಅರವಿಂದ್ ಬೋಳಾರ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯ ಉಪನಿರೀಕ್ಷಣಾಧಿಕಾರಿ ಉದಯ ರವಿ, ಪ್ರಗತಿಪರ ಕೃಷಿಕ ಕಡಮಜಲು ಸುಭಾಸ್ ರೈ, ಗೆಜ್ಜೆ ನಂದನ ಬಿತ್ತೆಲ್ ನ ಯಜಮಾನರಾದ ಶ್ರೀಧರ ಪೂಜಾರಿ, ಅರಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಂತೋಷ್ ಮಣಿಯಾಣಿ ಕುತ್ಯಾಡಿ, ಬೆಂಗಳೂರು ಅವಲಹಳ್ಳಿ ಪೊಲೀಸ್ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ, ನಿರೂಪಕಿ, ಬರಹಗಾರ್ತಿ ರೇಣುಕಾ ಕಣಿಯೂರು ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷವಾಗಿ ರಾತ್ರಿ 9 ಗಂಟೆಗೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ‘ಕಲಾ ಸಂಗಮ’ ಕಲಾವಿದರು ಅಭಿನಯಿಸಿರುವ, 150ನೇ ಪ್ರಯೋಗಕ್ಕೆ ಮುನ್ನುಗ್ಗುತ್ತಿರುವ, ತುಳು ರಂಗಭೂಮಿಯಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದ, ಸ್ವರಾಜ್ ಶೆಟ್ಟಿ ಅಭಿನಯದ ‘ಶಿವದೂತೆ ಗುಳಿಗೆ’ ವಿಭಿನ್ನ ಶೈಲಿಯ ತುಳು ನಾಟಕ ಮೂಡಿಬರಲಿದೆ.