ವಿಟ್ಲ: ಹಿಂದೂ ಕಾರ್ಯಕರ್ತನ ಮೇಲೆ ಅನ್ಯಕೋಮಿನ ತಂಡವೊಂದು ಹಲ್ಲೆ ನಡೆಸಿದ ಘಟನೆ ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ಅ.18 ರ ತಡರಾತ್ರಿ ನಡೆದಿದೆ.
ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡದ ಉಪಾಧ್ಯಕ್ಷ ಜಯ ಕೊಟ್ಟಾರಿ ಮೇಲೆ ಓಕ್ಕೆತ್ತೂರಿನ ಅನ್ಯಕೋಮಿನ ತಂಡ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಅ.18 ರ ತಡರಾತ್ರಿ ಒಕ್ಕೆತ್ತೂರಿನಲ್ಲಿ ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡದ ಉಪಾಧ್ಯಕ್ಷ ಜಯ ಕೊಟ್ಟಾರಿ ಯವರು ಚಲಾಯಿಸುತ್ತಿದ್ದ ರಿಟ್ಝ್ ಕಾರು ಹಾಗೂ ಆಟೋ ರಿಕ್ಷಾದ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಯುವಕರ ತಂಡವು ಜಯ ಕೊಟ್ಟಾರಿ ಮೇಲೆ ಹಲ್ಲೆ ನಡೆಸಿದೆ.
ಜಯ ಕೊಟ್ಟಾರಿಯವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ.
ಜಯ ಕೊಟ್ಟಾರಿಯವರ ಮೇಲೆ ಕ್ಷುಲ್ಲಕ ಕಾರಣವೊಡ್ಡಿ ಹಲ್ಲೆ ನಡೆಸಿದ್ದನ್ನು ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡ ತೀವ್ರವಾಗಿ ಖಂಡಿಸಿದೆ. ಅಪಘಾತ ನಡೆದ ಸ್ಥಳದಲ್ಲಿ ಈ ಹಿಂದೆಯೂ ಗುಂಪುಗಟ್ಟಿಕೊಂಡು ಬೆದರಿಸಿದ ಪ್ರಕರಣ ಅನೇಕ ನಡೆದಿತ್ತು. ನಿನ್ನೆ ನಮ್ಮ ಕಾರ್ಯಕರ್ತರಿಗೆ ಹಲ್ಲೆ ನಡೆಸಿದ್ದು ಖಂಡನೀಯ ಎಂದು ವಿ.ಹಿಂ.ಪ ವಿಟ್ಲ ಪ್ರಖಂಡ ಇದರ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಕಾರ್ಯಾಧ್ಯಕ್ಷ ಪದ್ಮನಾಭ ಕಟ್ಟೆ, ಕಾರ್ಯದರ್ಶಿ ಚರಣ್ ಕಾಪುಮಜಲು, ಬಜರಂಗದಳದ ಸಂಚಾಲಕ ಮಿಥುನ್ ಪೂಜಾರಿ ಕಲ್ಲಡ್ಕ, ಸಹಸಂಚಾಲಕ್ ಚಂದ್ರಹಾಸ್ ಕನ್ಯಾನ, ಸಹಸುರಕ್ಷಾ ಪ್ರಮುಖ್ ದೇವದಾಸ್ ಮಾಪಲ ತೀವ್ರವಾಗಿ ಖಂಡಿಸಿದ್ದು, ತನಿಖೆ ನಡೆಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.