ಬೆಳ್ತಂಗಡಿ: ಕಾಶಿಪಟ್ಣ ಗ್ರಾಮದ ಪಿಂಟೋ ನಗರ ನಿವಾಸಿಗಳಾದ ಮೆಲ್ವಿನ್ ಪಿಂಟೋ ಹಾಗೂ ಹೆಲನ್ ಪಿಂಟೋ ರವರ ಮಗ ಮಾರ್ಟಿನ್ ಪಿಂಟೋ ಅ.19 ರಂದು ಕಾಣೆಯಾಗಿದ್ದು, ಆತನ ಮೃತದೇಹ ಫಲ್ಗುಣಿ ನದಿಯ ಮೊರಂತಕಾಡು ಸೇತುವೆಯ ಬಳಿ ಅ.20 ರಂದು ಪತ್ತೆಯಾಗಿದೆ.
ಅ.19 ರಂದು ಮಾರ್ಟಿನ್ ಕಾಣೆಯಾಗಿದ್ದ ಈ ಬಗ್ಗೆ ಆತನ ಮನೆಯವರು ವೇಣೂರು ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಅಕ್ರ 65/2021 ಕಲಂ 363 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರ ಶೋಧದಿಂದಾಗಿ ಅ.20 ರಂದು ಫಲ್ಗುಣಿ ನದಿಯ ಮೊರಂತಕಾಡು ಸೇತುವೆಯ ಬಳಿ ಮೃತದೇಹ ಪತ್ತೆಯಾಗಿದೆ. ನದಿಯಲ್ಲಿ ಸ್ನಾನಕ್ಕೆಂದು ಇಳಿದಾಗ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.