ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಸ್ವಸಹಾಯ ಸಂಘಗಳ ಬಾಳ್ತಿಲ ಒಕ್ಕೂಟದ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಸುಗುಣ ಮತ್ತು ಸೇವಾ ಪ್ರತಿನಿಧಿ ವಿದ್ಯಾ ಬೊಂಡಾಲ ವಲಯ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ನಾಯ್ಕ್ ಗುಂಡೂರು ರವರ ಉಪಸ್ಥಿತಿಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಉಮಾವತಿ ಪೂರ್ಲಿಪ್ಪಾಡಿ ,ಉಪಾಧ್ಯಕ್ಷರಾಗಿ ಉಷಾ, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಬೋಲ್ಪೋಡಿ, ಜೊತೆ ಕಾರ್ಯದರ್ಶಿಯಾಗಿ ಹರೀಶ್ ಗುಂಡೂರು, ಕೋಶಾಧಿಕಾರಿಯಾಗಿ ರೋಹಿತ್ ಕಾಂಪ್ರ ಬೈಲು, ಉಪಸಮಿತಿ ಸದಸ್ಯರಾಗಿ ನೇತ್ರಾವತಿ, ರತ್ನ, ಪೂರ್ಣಿಮಾ, ಲೀಲಾ ಉಮೇಶ್ ಪುರ್ಲಿ ಪಾಡಿಯವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಾಳ್ತಿಲ ಒಕ್ಕೂಟದ ಸ್ವಸಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.