ಪುತ್ತೂರು: ಖಾಸಗಿ ಬಸ್ ನಿಲ್ದಾಣದ ಬಳಿ ಅ.19 ರಂದು ದೊರೆತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚೆಕ್ ಅನ್ನು ಪುತ್ತೂರು ತಾಲೂಕು ಕಬಕ ಗ್ರಾಮದ ಪೋಳ್ಯ ನಿವಾಸಿ ಅಬ್ದುಲ್ ಮಜೀದ್ ರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿದ್ದು, ಅ.20 ರಂದು ಆ ಚೆಕ್ ಅನ್ನು ಶ್ರೀ ಮಹಾಲಿಂಗಶ್ವರ ದೇವಸ್ಥಾನದ ಪರವಾಗಿ ಅಲ್ಲಿನ ಸಿಬ್ಬಂದಿ ವಿಶ್ವನಾಥ್ ರವರಿಗೆ ಹಸ್ತಾಂತರಿಸಿದರು.