ಉಪ್ಪಿನಂಗಡಿ: ಸ್ಥಳೀಯ ಬಸ್ ನಿಲ್ದಾಣದಲ್ಲಿ ಲಘವಾಹನಗಳ ನಿಲುಗಡೆಗೆ ವಿಧಿಸಲಾದ ನಿಷೇಧವನ್ನು ಉಲ್ಲಂಘಿಸಿದರೆಂಬ ಕಾರಣಕ್ಕೆ ಸಾರಿಗೆ ಇಲಾಖಾಧಿಕಾರಿಗಳ ಜೀಪೊಂದಕ್ಕೆ ಸ್ಥಳೀಯ ಪಂಚಾಯತ್ ಪಿಡಿಓ ಲಾಕ್ ಹಾಕಿದ ದಂಡ ವಿಧಿಸಿದ ಘಟನೆ ನಡೆದಿದೆ.
ಹೊಸ ಬಸ್ ನಿಲ್ದಾಣವು ಗ್ರಾ.ಪಂ. ಅಧೀನದಲ್ಲಿದ್ದು, ಸರ್ಕಾರಿ ಬಸ್ ಹಾಗೂ ಖಾಸಗಿ ಬಸ್ ಒಂದೇ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದ್ದು, ಈಗಾಗಲೇ ಬಸ್‌ಗಳ ಸಂಖ್ಯೆ ಹೆಚ್ಚಾಗಿದ್ದು ವಾಹನ ದಟ್ಟನೆಯುಂಟಾದ ಹಿನ್ನೆಲೆಯಲ್ಲಿ ಲಘು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು. ಹಾಗೂ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಲಘು ವಾಹನಗಳ ನಿಷೇಧ ಫಲಕ ಅಳವಡಿಸಲಾಗಿತ್ತು. ಆದರೆ ಇದನ್ನು ಲೆಕ್ಕಿಸದೆ ಬಸ್ಸುಗಳು ನಿಲ್ಲುವ ಜಾಗದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಸಿಬ್ಬಂದಿ ತನಿಖಾ ತಂಡದ ವಾಹನ ನಿಲ್ಲಿಸಿದ ಬಗ್ಗೆ ಮಾಹಿತಿ ಪಡೆದ ಪಿಡಿಒ ಸ್ಥಳಕ್ಕೆ ಬಂದು ಸರ್ಕಾರಿ ವಾಹನಕ್ಕೆ ವೀಲ್‌ಲಾಕ್ ಹಾಕಿದರು.
ಈ ವಿಲಕ್ಷಣ ಘಟನೆಯಿಂದ ಕಸಿವಿಸಿಗೊಳಗಾದ ಅಧಿಕಾರಿಗಳು, ಪಂಚಾಯಿತಿ ಆಡಳಿತಕ್ಕೆ ದಂಡ ಪಾವತಿಸಿ ವಾಹನವನ್ನು ಲಾಕ್ ಮುಕ್ತಗೊಳಿಸಿದರು ಎಂದು ತಿಳಿದು ಬಂದಿದೆ.

























