ಪುತ್ತೂರು: ವಿದ್ಯುತ್ ಅವಘಡದಿಂದಾಗಿ ಇಲೆಕ್ಟ್ರಾನಿಕ್ಸ್ ಮಳಿಗೆಯೊಂದರಲ್ಲಿ ಸ್ವಲ್ಪ ಮಟ್ಟದ ಬೆಂಕಿ ಕಾಣಿಸಿಕೊಂಡು ಶಾಪ್ ತುಂಬೆಲ್ಲಾ ಹೊಗೆ ಆವರಿಸಿದ ಘಟನೆ ಅ.21 ರಂದು ಬೊಳುವಾರಿನ ಗಣೇಶ್ ಇಲೆಕ್ಟ್ರೋ ವೈಂಡರ್ಸ್ ನಲ್ಲಿ ನಡೆದಿದೆ.
ಇಲೆಕ್ಟ್ರಿಕಲ್ ಸಾಮಾಗ್ರಿಗಳ ರಿಪೇರಿ ಮತ್ತು ಬಿಡಿಭಾಗಗಳ ಮಳಿಗೆಯಾದ ಗಣೇಶ್ ಇಲೆಕ್ಟ್ರೋ ವೈಂಡರ್ಸ್ ನಲ್ಲಿ ಅ.20 ರಂದು ಮಧ್ಯಾಹ್ನದ ವೇಳೆ ವಿದ್ಯುತ್ ಶಾಕ್ ಸರ್ಕ್ಯೂಟ್ ನಿಂದಾಗಿ ಸ್ವಲ್ಪ ಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಶಾಪ್ ತುಂಬೆಲ್ಲಾ ಹೊಗೆ ಆವರಿಸಿತ್ತು ತಕ್ಷಣ ಎಚ್ಚೆತ್ತ ಮಳಿಗೆಯವರು ಮತ್ತು ಸಾರ್ವಜನಿಕರು ಬೆಂಕಿಯನ್ನು ಆರಿಸಿದ್ದು, ನಡೆಯ ಬಹುದಾಗಿದ್ದ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ. ಕೆಲ ವಸ್ತುಗಳಿಗೆ ಸ್ವಲ್ಪ ಪ್ರಮಾಣ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ.