ಎಲ್ ಕೆ ಜಿ ಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ನುರಿತ ಮತ್ತು ವೃತ್ತಿಪರ ಶಿಕ್ಷಕರಿಂದ ಅತ್ಯುನ್ನತ ಬೋಧನೆ, ನವೀನ ಮಾದರಿಯ ಕಲಿಕಾ ವಿಧಾನ, ಕ್ರಮಬದ್ಧ ಪಠ್ಯ ಯೋಜನೆ, ನಿಖರ ಫಲಿತಾಂಶ ಭರವಸೆ, ಪ್ರಶಾಂತ ವಾತಾವರಣವನ್ನು ಹೊಂದಿಕೊಂಡಿರುವ ವಿದ್ಯಾ ಸಂಸ್ಥೆಯೇ ಜ್ಞಾನ ಸುಧಾ ವಿದ್ಯಾ ಬೋಧನಾ ಕೇಂದ್ರ.
. ಈ ವಿದ್ಯಾಸಂಪನ್ನ ಜ್ಞಾನ ಸುಧಾ ವಿದ್ಯಾಬೋಧನಾ ಕೇಂದ್ರದ ಶುಭಾರಂಭ ಕಾರ್ಯಕ್ರಮವು ಕಡಬ ತಾಲೂಕಿನ ಆಲಂಕಾರು ಮುಖ್ಯ ರಸ್ತೆಯ ಶ್ರೀ ದುರ್ಗಾ ಟವರ್ಸ್ ನ ನೆಲಮಹಡಿಯಲ್ಲಿ ನಡೆಯಿತು.. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಕಚೇರಿ ಉದ್ಘಾಟನೆ ಮತ್ತು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು…
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ರಾಮಕುಂಜದ ಕಾರ್ಯದರ್ಶಿ ಕೆ ಸೇಸಪ್ಪ ರೈ ಅಧ್ಯಕ್ಷತೆ ವಹಿಸಿದ್ದು ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ನಡೆಸಿ ಮಾತನಾಡಿದರು..
ಬೆಳಂದೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ದನ, ಗ್ರಾ. ಪಂ. ಆಲಂಕಾರಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎ ಜಗನ್ನಾಥ ಶೆಟ್ಟಿ, ಅರಸಿನಮಕ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಎಸ್ ದುಗ್ಗಪ್ಪ ಗೌಡ, ಶ್ರೀ ದುರ್ಗಾ ಟವರ್ಸ್ ಕಟ್ಟಡ ಮಾಲಕರಾದ ರಾಧಾಕೃಷ್ಣ ರೈ, ರಾಧಾಕೃಷ್ಣ ರೈ, ಪೂರ್ಣೇಶ್, ಕಮಲಾಕ್ಷ ರೈ, ರಾಘವೇಂದ್ರ, ಪ್ರಮೀಳಾ ಜನಾರ್ದನ ಪ್ರಶಾಂತ್ ರೈ, ಸರಿತಾ ಜನಾರ್ದನ, ನವೀನ ಮಾಯಿಲ, ಜಗನ್ನಾಥ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.