ಬ್ರಹ್ಮಾವರ: ವ್ಯಕ್ತಿಯೊಬ್ಬರ ಮಾಲೀಕತ್ವದ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯ ತಲೆಬುರುಡೆ ಮತ್ತು ಅಸ್ಥಿಪಂಜರದ ಅವಶೇಷಗಳು ಪತ್ತೆಯಾದ ಘಟನೆ ಯಡಾಡಿ ಮತ್ಯಾಡಿ ಗ್ರಾಮದ ಕ್ಯಾಸನಮಕ್ಕಿ ಬಳಿಯ ಹಡ್ಕದಲ್ಲಿ ಅ.25 ರಂದು ನಡೆದಿದೆ.
ಸ್ಥಳೀಯರಾದ ಸುದರ್ಶನ್ ಎಂಬುವವರ ಮಾಲೀಕತ್ವದ ಹಾಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ತರಗೆಲೆ ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸುತ್ತಿದ್ದಾಗ ಅವರಿಗೆ ತಲೆಬುರುಡೆ, ಕೈ ಕಾಲುಗಳ ಮೂಳೆಗಳು ಮತ್ತು ಬಟ್ಟೆಗಳು ಕಂಡು ಬಂದಿದೆ.
ಸ್ಥಳಕ್ಕೆ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್ ಬಿ ಪಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.