ಪ್ರತಿಷ್ಠಿತ ಬುಳೆರಿಕಟ್ಟೆ ಪ್ರೀಮಿಯರ್ ಲೀಗ್ 2021 ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ತಂಡಗಳಲ್ಲಿ ಒಂದಾದ ಡೊಮಿನಟರ್ಸ್ ಸಾಜ ತಂಡದ ಸಮವಸ್ತ್ರ ದ ಅನಾವರಣ ಕಾರ್ಯಕ್ರಮ ಜನವರಿ 24 ರಂದು ಅಟ್ಲಾರು ಹರೀಶ್ ಪೂಜಾರಿ ಅವರ ಮನೆಯ ಕೊರಗಜ್ಜ ದೈವದ ಕಟ್ಟೆಯ ಬಳಿ ನಡೆಯಿತು..
![](https://zoomintv.online/wp-content/uploads/2021/01/IMG-20210124-WA0113-1024x768.jpg)
ಪುತ್ತೂರು ಸಂಚಾರಿ ಪೊಲೀಸ್ ಠಾಣೆ ಎಸ್ ಐ ಆಗಿರುವ ರಾಮ ನಾಯ್ಕ ಅವರು ಸಮವಸ್ತ್ರವನ್ನು ಅನಾವರಣ ಗೊಳಿಸಿ ತಂಡಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ತಂಡದ ಮಾಲಕರು ಶಶಿತ್ ಎಸ್, ಶಶಿಧರ್ ಸಾಜ ಮತ್ತು ಹರೀಶ್ ಪೂಜಾರಿ, ಶೈಲೇಶ್ ರೈ, ತಂಡದ ತರಬೇತುದಾರ ನಿರಂಜನ್ ಎಮ್, ವ್ಯವಸ್ಥಾಪಕರ ಕೃಪಾನ್ ಕುಮಾರ್ ಅಟ್ಲಾರು, ಭವಿಷ್ಯತ್ ಪೂಜಾರಿ, ಮತ್ತು ತಂಡ ಆಟಗಾರರು, ಮತ್ತಿತರರು ಉಪಸ್ಥಿತರಿದ್ದರು.
![](https://zoomintv.online/wp-content/uploads/2021/01/IMG-20210124-WA0114-1024x585.jpg)