ಉಳ್ಳಾಲ: ಸಿಡಿಲು ಬಡಿದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾನದಬೆಟ್ಟು ಹರೇಕಳ ಎಂಬಲ್ಲಿ ಅ.31 ರಂದು ಸಂಜೆ ಸಂಭವಿಸಿದೆ.
ಮೃತ ಯುವಕನನ್ನು ಹಸನಬ್ಬ ಎಂಬವರ ಪುತ್ರ ಅಬ್ದುಲ್ ರಹ್ಮಾನ್ (33) ಎಂದು ಗುರುತಿಸಲಾಗಿದೆ.
ರಹ್ಮಾನ್ ರವರು ಗದ್ದೆಯಲ್ಲಿ ಕಟ್ಡಿದ್ದ ದನವನ್ನು ಬಿಡಿಸಿಕೊಂಡು ಮನೆಯತ್ತ ಬರುವ ವೇಳೆ ಸಿಡಿಲು ಬಡಿದಿದ್ದು, ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ 3 ವರ್ಷದ ಮಗು ಹಾಗೂ 40 ದಿನದ ಹಸುಗೂಸನ್ನು ಅಗಲಿದ್ದಾರೆ.