ಸುಬ್ರಹ್ಮಣ್ಯ: ಕುಮಾರಧಾರ ನದಿಗೆ ಹಾರಲು ಯತ್ನಿಸಿದ ವೃದ್ಧರೊಬ್ಬರನ್ನು ಬಜರಂಗಳದ ಕಾರ್ಯಕರ್ತನೊಬ್ಬ ರಕ್ಷಣೆ ಮಾಡಿದ ಘಟನೆ ನ.2 ರಂದು ಸಂಜೆ ನಡೆದಿದೆ.
ನ.2 ರಂದು ಸಂಜೆ ಕುಮಾರಧಾರ ನದಿ ಬಳಿ ಹಾಸನ ಮೂಲದ ವೃದ್ದರೊಬ್ಬರು ಕುಮಾರಧಾರ ಸೇತುವೆ ಮೇಲಿಂದ ಕೆಳಗೆ ಹಾರಲು ಪ್ರಯತ್ನಿಸುತಿದ್ದ ವೇಳೆ ಬಜರಂಗಳದ ಕಾರ್ಯಕರ್ತ ಸುನಿಲ್ ರವರು ವೃದ್ದರನ್ನು ರಕ್ಷಿಸಿ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.