ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಸ್ವಸಾಯ ಸಂಘಗಳ ಗೋಳ್ತಮಜಲು -ಎ ಒಕ್ಕೂಟದ ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಕಲ್ಲಡ್ಕ ವಲಯದ ಅಧ್ಯಕ್ಷರಾದ ಈಶ್ವರ ನಾಯ್ಕ, ಮೇಲ್ವಿಚಾರಕರಾದ ಸುಗುಣ ಶೆಟ್ಟಿ ಮತ್ತು ಸೇವಾ ಪ್ರತಿನಿಧಿ ಕೌಶಿತ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ನಡೆಯಿತು.
ಗೋಳ್ತಮಜಲು -ಎ ಒಕ್ಕೂಟದ ನೂತನ ಅಧ್ಯಕ್ಷರಾಗಿ ಈಶ್ವರ ನಾಯ್ಕ ಮುರಬೈಲು, ಉಪಾಧ್ಯಕ್ಷರಾಗಿ ಚಿದಾನಂದ ಪಟ್ಟೆಕೊಡಿ, ಕಾರ್ಯದರ್ಶಿಯಾಗಿ ವನಿತಾ ರಾಮನಗರ, ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮಣ ಗೋಳ್ತಮಜಲು,ಕೋಶಾಧಿಕಾರಿಯಾಗಿ ಸುಲೋಚನ ಬಲ್ಲೆಕೋಡಿ ,ಉಪಸಮಿತಿ ಸದಸ್ಯರಾಗಿ ಪ್ರಪುಲ್ಲ ,ಎವ್ಲಿನ್ ಡಿಸೋಜ ,ಭಾಗಿರತಿ, ಉದಯಕುಮಾರ್, ಲೋಕೇಶ್ ರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಗೋಳ್ತಮಜಲು- ಎ ಒಕ್ಕೂಟದ ಸ್ವಸಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.