ಬಂಟ್ವಾಳ: ಮರ ಕಡಿಯುವಾಗ ಆಕಸ್ಮಿಕವಾಗಿ ಮೈಮೇಲೆ ತೆಂಗಿನ ಮರ ಬಿದ್ದು, ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅ.7 ರಂದು ನಡೆದಿದೆ.
ಮೃತ ರನ್ನು ಸುರೇಶ್ (38) ಎಂದು ಗುರುತಿಸಲಾಗಿದೆ.
ಸುರೇಶ್ ನೆರೆ ಮನೆಯ ಭುಜಂಗ ಶೆಟ್ಟಿ ಅವರ ಮನೆಯ ತೋಟದಲ್ಲಿದ್ದ ತೆಂಗಿನ ಮರವನ್ನು ಕಡಿಯಲು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಮಧ್ಯಾಹ್ನ ತೆಂಗಿನ ಮರ ಕಡಿದು ನೆಲಕ್ಕೆ ಬಿದ್ದಾಗ, ಅದರ ಪಕ್ಕದಲ್ಲೆ ಇದ್ದ ಸತ್ತ ಒಣಗಿದ ತೆಂಗಿನ ಮರ ಆಕಸ್ಮಿಕ ವಾಗಿ ಸುರೇಶ್ ಅವರ ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು, ಕೂಡಲೇ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.